ಸುದ್ದಿ

ಪ್ರೀತಿಗೆ ಮತ್ತು ಮದುವೆಗೆ ಅಡ್ಡಿಪಡಿಸುವುದು ಸಂಪೂರ್ಣ ಅಕ್ರಮ ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ:  ವಯಸ್ಕರು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರೆ ಅದಕ್ಕೆ ಅಡ್ಡಿಪಡಿಸುವುದು ಅಥವಾ ತೊಂದರೆ ನೀಡುವುದು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇಬ್ಬರು ವಯಸ್ಕ ವ್ಯಕ್ತಿಗಳು ಮದುವೆಯಾಗಲು ನಿರ್ಧರಿಸಿ ಪ್ರೀತಿಯಿಂದ ಬದುಕಲು ತೀರ್ಮಾನಿಸುವುದು ವ್ಯಕ್ತಿಗಳ ಮೂಲಭೂತ ಹಕ್ಕಾಗಿದ್ದು ಅದು ಅಂತಿಮ.

ಈ ವಿಷಯದಲ್ಲಿ ಯಾರಿಗೂ ಅಡ್ಡಿಪಡಿಸಲು ಹಕ್ಕು ಇರುವುದಿಲ್ಲ ಎನ್ನುವ ಮೂಲಕ ಸುಪ್ರೀಂ ಕೋರ್ಟ್ ಪೋಷಕರು, ಸಮಾಜ, ಸರ್ಕಾರಗಳಿಗೆ ಅಂತಿಮ ಎಚ್ಚರಿಕೆ ರವಾನಿಸಿದೆ. ಮರ್ಯಾದ ಹತ್ಯೆಗೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ ಇದ್ದ ನಿರ್ದಿಷ್ಟ ಕಾನೂನಿನ ಕೊರತೆಯನ್ನು ಸುಪ್ರೀಂ ಕೋರ್ಟ್ ನ ಇಂದಿನ ತೀರ್ಪು ಭರಿಸಿದೆ ಎಂದು ಹೇಳಬಹುದು.

ಮದುವೆ ಸಿಂಧುವೇ ಅಥವಾ ಅಸಿಂಧುವೇ ಮತ್ತು ಮಕ್ಕಳು ಹುಟ್ಟಿದ್ದರೆ ಅದು ಕಾನೂನುಬದ್ಧವೇ ಅಲ್ಲವೇ ಎಂದು ತೀರ್ಮಾನಿಸುವ ಕೆಲಸ ನ್ಯಾಯಾಲಯಗಳದ್ದಾಗಿರುತ್ತದೆಯೇ ಹೊರತು ಇದರಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

 

 

About the author

ಕನ್ನಡ ಟುಡೆ

Leave a Comment