ಸಿನಿ ಸಮಾಚಾರ

ಪ್ರೇಮಬರಹಕ್ಕೆ ಗೆಲುವಿನ ಸಂಭ್ರಮ

ಬೆಂಗಳೂರು:ನಾನು ಎಷ್ಟೋ ಸಿನಿಮಾಗಳ ಸಕ್ಸೆಸ್‌ ಮೀಟ್‌ ಮಾಡಿದ್ದೇನೆ. ಆದರೆ ಈ ಸಕ್ಸೆಸ್‌ ಮೀಟ್‌ ನನ್ನ ಹೃದಯಕ್ಕೆ ತುಂಬ ಹತ್ತಿರವಾದದ್ದು. ಯಾಕೆಂದರೆ ಈ ಚಿತ್ರದ ಮೂಲಕ ನಾನು ನನ್ನ ಮಗಳನ್ನು ನಟಿಯಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದೇನೆ’

ಚಿತ್ರದ ಯಶಸ್ಸನ್ನು ಹಂಚಿಕೊಳ್ಳಲು ಹೊರಟ ಅರ್ಜುನ್‌ ಈ ಚಿತ್ರಕ್ಕೂ ತಮಗೂ ಇರುವ ವಿಶೇಷ ಸಂಬಂಧದ ಕುರಿತಾಗಿಯೇ ಮಾತನಾಡುತ್ತ ಹೋದರು. ವ್ಯಾವಹಾರಿಕವಾಗಿ ಇದೊಂದು ಹಿಟ್‌ ಸಿನಿಮಾ. ನನ್ನ ಇದು ಸೂಪರ್‌ ಡೂಪರ್‌ ಹಿಟ್‌. ಯಾಕೆಂದರೆ ಐಶ್ವರ್ಯಾಳನ್ನು ನನ್ನ ಮಗಳು ಎಂದಷ್ಟೇ ಅಲ್ಲದೇ ಒಬ್ಬ ಒಳ್ಳೆಯ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಹೆಮ್ಮೆ ನನಗಿದೆ’ ಎಂದು ಹೇಳಿದರು.

‘ನಾನು  ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಚಿತ್ರಕಥೆಯನ್ನು ಇಷ್ಟು ಆಸಕ್ತಿಯಿಂದ ರೂಪಿಸಿ ಇಷ್ಟು ನಿಖರವಾಗಿ ಚಿತ್ರವನ್ನು ಮಾಡುವುದನ್ನು ನೋಡಿರುವುದು ‘ಪ್ರೇಮಬರಹ’ದಲ್ಲಿ. ಕಥೆ ಚೆನ್ನಾಗಿದ್ದರೆ ಖಂಡಿತ ಸಿನಿಮಾ ಗೆಲ್ಲುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

ಚಿತ್ರದ ನಾಯಕ ಚಂದನ್‌ ಅವರನ್ನು ನೋಡಿದ ಅವರ ಸ್ನೇಹಿತರೆಲ್ಲ ‘ನಿನ್ನ ಹಳೆಯ ಸಿನಿಮಾಗಳಿಗಿಂತ ನಟನೆಯಲ್ಲಿ ನೂರು ಪಟ್ಟು ಚೆನ್ನಾಗಿದೆ’ ಎಂದು ಹೇಳುತ್ತಿದ್ದಾರಂತೆ. ಈ ಎಲ್ಲಾ ವನ್ನು ಅವರು ಅರ್ಜುನ್‌ ಅವರಗೆ ಸಲ್ಲಿಸಿದ್ದರು.‘ಈ ಚಿತ್ರದ ಯಶಸ್ಸಿನ ಹಿಂದೆ ಹಲವರ ಶ್ರಮವಿದೆ.

ಕರ್ನಾಟಕದ ಜನರು ತುಂಬ ಅದ್ಭುತವಾಗಿ ನನ್ನನ್ನು ಸ್ವಾಗತಿಸಿದ್ದಾರೆ. “ನನ್ನೊಳಗಿನ ನಟಿಯನ್ನು ಗುರ್ತಿಸಿದ್ದು ತಂದೆ ಅರ್ಜುನ್ ಸರ್ಜಾ ಅವರಿಗೂ ನಾನು ಧನ್ಯವಾದ ಹೇಳಲೇಬೇಕು” ಎಂದರು ಐಶ್ವರ್ಯಾ ಅರ್ಜುನ್‌ ಸರ್ಜಾ.

 

About the author

ಕನ್ನಡ ಟುಡೆ

Leave a Comment