ಸಿನಿ ಸಮಾಚಾರ

ಪ್ರೇಮ್ ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿಗೆ ಸುಧಾರಾಣಿ ಪುತ್ರಿ ನಾಯಕಿ

ಬೆಂಗಳೂರು: ವಿಲ್ಲನ್ ನಂತರ ನಿರ್ದೆಶಕ ಪ್ರೇಮ್ ಲವ್ ಸ್ಟೋರಿ ಕೈಗೆತ್ತಿಕೊಂಡಿದ್ದಾರೆ, ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಆಗಿದ್ದು, ಅದಕ್ಕಾಗಿ ಪ್ರೇಮ್ ಕಥೆ ಬರೆಯುತ್ತಿದ್ದಾರೆ, ನನ್ನ ಮುಂದಿನ ಸಿನಿಮಾಗಾಗಿ ನಾನು ಚಿತ್ರಕಥೆ ಬರೆಯುತ್ತಿದ್ದು, ಕೆಲವು ದಿನಗಳು ನಾನು ಯಾರ ಸಂಪರ್ಕಕ್ಕೂ ಸಿಗುವುದಿಲ್ಲ ಎಂದು ಪ್ರೇಮ್ ಹೇಳಿದ್ದಾರೆ.
ವಾಪಸ್ ಬಂದ ಬಳಿಕ ಹಾಡುಗಳನ್ನು ಬರೆಯಲು ಶುರು ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಪ್ರೇಮ್ ತಮ್ಮ ಪತ್ನಿ ರಕ್ಷಿತಾ ಸಹೋದರ ಅಭಿಷೇಕ್ ರನ್ನು ನಾಯಕನಾಗಿಸಿ, ಹೊಸಬರ ಟೀಂ ಕಟ್ಟಿಕೊಂಡು ಸಿನಿಮಾ ಮಾಡಲಿದ್ದಾರೆ, ಇದೊಂದು ರಿಯಲ್ ಲವ್ ಸ್ಟೋರಿಯಾಗಿದೆ, ಆದರೆ ಕಥೆ ಎಲ್ಲಿ ಹುಟ್ಚಿತು ಎಂಬುದನ್ನು ನಾನು ಹೇಳುವುದಿಲ್ಲ, ಜೊತೆಗೆ ಆ ಪ್ರೇಮಿಗಳ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ, ವಿದೇಶದಲ್ಲಿ ತರಬೇತಿ ಪಡೆದುಕೊಂಡು ಬಂದಿರುವ ರಕ್ಷಿತಾ ಸಹೋದರ ಈಗ ತಮ್ಮ ಭಾವ ಪ್ರೇಮ್ ನಿರ್ದೇಶನದ ಸಿನಿಮಾ ಮೂಲಕರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪ್ರೇಮ್, ಅಭಿಷೇಕ್ ಫೋಟೋ ಶೂಟ್ ನಡೆಸಿದ್ದು, ಪ್ರೇಮಿಗಳ ದಿನಾಚರಣೆಯಂದು  ಸಿನಿಮಾ ಟೈಟಲ್ ಲಾಂಚ್ ಮಾಡಿಸುವುದಾಗಿ ಹೇಳಿದ್ದಾರೆ, ಸಿನಿಮಾ ನಿರ್ಮಾಪಕರು ಯಾರು ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಸುಧಾರಾಣಿ ಪುತ್ರಿ ನಿಧಿ ನಿರ್ದೇಶಕ ಪ್ರೇಮ್ ಮಾಡಲಿರುವ ಹೊಸಬರ ಚಿತ್ರವೊಂದಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ನಾನು ಸುಧಾರಾಣಿ  ಅವರನ್ನಾಗಲಿ, ಅವರ ಪುತ್ರಿ ನಿಧಿಯನ್ನು ನಾವು ಸಂಪರ್ಕಿಸಿಲ್ಲ, ಆದರೆ ಈ ಐಡಿಯಾ ಕೊಟ್ಟಿದ್ದಕ್ಕೆ ಮಾಧ್ಯಮಗಳಿಗೆ ಪ್ರೇಮ್ ಥ್ಯಾಂಕ್ ಹೇಳಿದ್ದಾರೆ .

About the author

ಕನ್ನಡ ಟುಡೆ

Leave a Comment