ಅ೦ತರಾಷ್ಟ್ರೀಯ

ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ 4 ಲಕ್ಷ ರೂ. ದಂಡ, ಯುವಕ ಜೈಲು ಪಾಲು

ಅಬುದಾಬಿ: ತನ್ನ ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ ಪ್ರಿಯಕನೋರ್ವ ಜೈಲು ಪಾಲಾದ ಅಚ್ಚರಿ ಘಟನೆ ಯುಎಇಯಲ್ಲಿ ನಡೆದಿದೆ. ಖಲೀಜ್ ಟೈಮ್ಸ್ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ ಖ್ಯಾತ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ತನ್ನ ಪ್ರೇಯಸಿ ಕಳುಹಿಸಿದ ಜೋಕ್ ಗೆ ಸಿಟ್ಟಾಗಿ ಈಡಿಯಟ್ ಎಂದಿದ್ದಕ್ಕೆ ಯುನೈಟೆಡ್ ಅರಬ್ ಎಮಿರಟ್ಸ್ ಸರ್ಕಾರ ಯುವಕನೊಬ್ಬನಿಗೆ 4 ಲಕ್ಷ ರೂ. ದಂಡ ಹಾಕಿದೆ. ತನ್ನ ಪ್ರೇಯಸಿ ಜೊತೆ ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದ ವೇಳೆ ಆಕೆ ಕಳುಹಿಸಿದ್ದ ಜೋಕ್ ಗೆ ಯುವಕ ಈಡಿಯಟ್ ಎಂದು ರಿಪ್ಲೈ ಮಾಡಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಯುವತಿ ಯುವಕನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿಯ ದೂರಿನ ಆಧಾರದ ಮೇಲೆ ಈಗ ಅಲ್ಲಿನ ಸರ್ಕಾರ ಪ್ರಿಯಕರ ಯುವತಿಗೆ ಅವಮಾನ ಮಾಡಿದ್ದಾನೆ. ಹೆಣ್ಣಿಗೆ ಗೌರವ ನೀಡಿಲ್ಲ ಎಂದು ಆತನಿಗೆ 60 ದಿನಗಳ ಜೈಲು ಶಿಕ್ಷೆ ಹಾಗೂ ಬರೋಬ್ಬರಿ ಸುಮಾರು 4 ಲಕ್ಷ ರೂ. ದಂಡ ಹಾಕಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎಇಯ ವಕೀಲರೊಬ್ಬರು, ಯುಎಇಯಲ್ಲಿ ಇಂತಹ ಘಟನೆಗಳು ಸಾಮಾನ್ಯ. ವಾಟ್ಸಪ್ ನಲ್ಲಿ ತಮಗೆ ಬಂದಿದ್ದ ವಿಡಿಯೋವನ್ನು ಫಾರ್ವರ್ಡ್ ಮಾಡಿದ ಒಂದೇ ಕಾರಣಕ್ಕೇ ಸೌದಿ ಸರ್ಕಾರ ವ್ಯಕ್ತಿಯೋರ್ವನಿಗೆ  ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು ಎಂದು ಹೇಳಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ಹೆಣ್ಣಿಗೆ ಅವಮಾನ ಮಾಡಿದರೆ ಅಥವಾ ಮಹಿಳೆಯರಿಗೆ ಬೈದರೆ ಅಲ್ಲಿನ ಸರ್ಕಾರ ಶಿಕ್ಷೆ ವಿಧಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment