ಕ್ರೀಡೆ

ಪ್ರೊ ಕಬಡ್ಡಿ ಪ್ಲೇಆಫ್ ಹಣಾಹಣಿಗೆ ವೇದಿಕೆ ಸಜ್ಜು

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ಆರನೇ ಆವೃತ್ತಿಯ 132 ಪಂದ್ಯಗಳ ಲೀಗ್ ಹಂತ ಮುಕ್ತಾಯ ಕಂಡಿದ್ದು, ಪ್ಲೇಆಫ್ ಹಣಾಹಣಿಗಳಿಗೆ ವೇದಿಕೆ ಸಜ್ಜಾಗಿದೆ. ಎ ಗುಂಪಿನಿಂದ ಗುಜರಾತ್ ಫಾರ್ಚೂನ್​ಜೈಂಟ್ಸ್ (22 ಪಂದ್ಯ, 17 ಜಯ, 3 ಸೋಲು, 2 ಟೈ), ಯು ಮುಂಬಾ (15 ಜಯ, 5 ಸೋಲು, 2 ಟೈ) ಮತ್ತು ದಬಾಂಗ್ ದೆಹಲಿ (11 ಜಯ, 9 ಸೋಲು, 2 ಟೈ) ಅಗ್ರ 3 ತಂಡಗಳಾಗಿ ಪ್ಲೇಆಫ್​ಗೇರಿದ್ದರೆ, ಬಿ ಗುಂಪಿನಿಂದ ಬೆಂಗಳೂರು ಬುಲ್ಸ್ (13 ಜಯ, 7 ಸೋಲು, 2 ಟೈ), ಬೆಂಗಾಲ್ ವಾರಿಯರ್ಸ್ (12 ಜಯ, 8 ಸೋಲು, 2 ಟೈ) ಮತ್ತು ಯುಪಿ ಯೋಧಾ (8 ಜಯ, 10 ಸೋಲು, 4 ಟೈ) ಮೊದಲ 3 ತಂಡಗಳಾಗಿ ಪ್ಲೇಆಫ್​ಗೇರಿವೆ.

ಭಾನುವಾರ ಕೊಚ್ಚಿಯಲ್ಲಿ ನಡೆಯಲಿರುವ ಮೊದಲೆರಡು ಎಲಿಮಿನೇಟರ್ ಪಂದ್ಯಗಳಲ್ಲಿ ಮುಂಬಾ-ಯೋಧಾ, ದೆಹಲಿ-ಬೆಂಗಾಲ್ ಪಂದ್ಯಗಳು ಸೆಣಸಲಿವೆ. ಸೋಮವಾರ ಗುಜರಾತ್-ಬೆಂಗಳೂರು ಕ್ವಾಲಿಫೈಯರ್-1ರಲ್ಲಿ ಸೆಣಸಲಿದ್ದು ಗೆದ್ದ ತಂಡ ಫೈನಲ್​ಗೇರಲಿದೆ. ಅದೇ ದಿನ, ಮೊದಲೆರಡು ಎಲಿಮಿನೇಟರ್​ಗಳಲ್ಲಿ ಗೆದ್ದ ತಂಡಗಳು 3ನೇ ಎಲಿಮಿನೇಟರ್​ನಲ್ಲಿ ಸೆಣಸಲಿವೆ. ನಂತರ ಮುಂಬೈನಲ್ಲಿ 2ನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.

About the author

ಕನ್ನಡ ಟುಡೆ

Leave a Comment