ಕ್ರೀಡೆ

ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿ: ಮುನ್ನಡೆದ ಯೋಧಾ, ಹೊರಬಿದ್ದ ಮುಂಬಾ

ಕೊಚ್ಚಿ: ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಯಲ್ಲಿ ಬಹುತೇಕ ಎಲ್ಲಾ ವಿಭಾಗದಲ್ಲೂ ಬಲಿಷ್ಠವೆನಿಸಿ ಕೊಂಡಿದ್ದ ಯು ಮುಂಬಾ ತಂಡ ಪ್ಲೇಆಫ್ ಸೆಣಸಾಟದಲ್ಲಿ ಯುಪಿ ಯೋಧಾ ತಂಡದ ಅದ್ಭುತ ಟ್ಯಾಕಲ್ ಸಾಹಸಕ್ಕೆ ಆಘಾತಕಾರಿ ಸೋಲನುಭವಿಸಿದೆ. ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಪ್ಲೇಆಫ್ ಹಣಾಹಣಿಯ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯು ಮುಂಬಾ 29-34 ಅಂಕಗಳಿಂದ ಆಘಾತಕಾರಿ ಸೋಲು ಕಂಡು ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದಿದೆ. 2ನೇ ಎಲಿಮಿನೇಟರ್ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ 39-28ರಿಂದ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಆಘಾತ ನೀಡಿತು. ಇದರಿಂದ ಲೀಗ್ ಹಂತದಲ್ಲಿ ಎ, ಬಿ ಗುಂಪಿನಲ್ಲಿ 2ನೇ ಸ್ಥಾನ ಪಡೆದಿದ್ದ ಮುಂಬಾ, ಬೆಂಗಾಲ್ ಹೊರಬಿದ್ದಿದ್ದರೆ, 3ನೇ ಸ್ಥಾನಿಗಳಾಗಿದ್ದ ದೆಹಲಿ, ಯೋಧಾ ತಂಡಗಳು ಎಲಿಮಿನೇಟರ್-3 ಹಂತಕ್ಕೆ ಮುನ್ನಡೆದಿವೆ. -ಏಜೆನ್ಸೀಸ್.

ಯೋಧಾ ಗೆಲ್ಲಿಸಿದ ಕರ್ನಾಟಕದ ಆಟಗಾರರು

ಮುಂಬಾಗೆ ಆಧಾರಸ್ತಂಭವಾಗಿದ್ದ ಸಿದ್ಧಾರ್ಥ್ ದೇಸಾಯಿಯನ್ನೇ ಗುರಿಯಿಟ್ಟುಕೊಂಡ ಯೋಧಾ, ಡಿಫೆಂಡರ್ ನಿತೇಶ್ ಕುಮಾರ್(8 ಅಂಕ) ಹಾಗೂ ಕನ್ನಡಿಗ ಜೀವಕುಮಾರ್(5) ಜೋಡಿಯ ಅದ್ಭುತ ಟ್ಯಾಕಲ್​ನಿಂದ ಮಿಂಚಿತು. ಯೋಧಾ ಗೆಲುವಿನಲ್ಲಿ ಕನ್ನಡಿಗರಾದ ಪ್ರಶಾಂತ್ ರೈ(4), ರಿಷಾಂಕ್ ದೇವಾಡಿಗ(5) ಕೂಡ ಕಾಣಿಕೆ ನೀಡಿದರು.

About the author

ಕನ್ನಡ ಟುಡೆ

Leave a Comment