ರಾಷ್ಟ್ರ ಸುದ್ದಿ

ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಜನ್ಮದಿನ: ಕೊಡಗಿನ ವೀರನಿಗೆ ಕೊಡವ ಭಾಷೆಯಲ್ಲೇ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್

ನವದೆಹಲಿ: ಇಂದು, ಭಾರತ ಸೇನಾ ಇತಿಹಾಸದ ಏಕೈಕ ಮಹಾ ದಂಡನಾಯಕ, ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ 120 ನೇ ಜನ್ಮದಿನ.
ಕೊಡಾಗಿನ ವೀರ ಯೋಧ ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವೀರ ಸೇನಾನಿಯನ್ನು ಸ್ಮರಿಸಿದ್ದು,  ಕೊಡವ ಭಾಷೆಯಲ್ಲೇ ಟ್ವೀಟ್ ಮಾಡಿದ್ದಾರೆ. ಕೊಡವ ತಕ್‌, ಕನ್ನಡ ಭಾಷೆಗಳಲ್ಲಿ ರಾಮನಥ್ ಕೋವಿಂದ್ ಅವರು ಮಾಡಿರುವ ಟ್ವೀಟ್ ಎಲ್ಲರ ಮನಗೆಲ್ಲುತ್ತಿದೆ.
ಫೀಲ್ಡ್‌ ಮಾರ್ಷಲ್‌ ಕೆ ಎಂ ಕಾರಿಯಪ್ಪನವರ ಜನ್ಮದಿನದ ಸ್ಮರಣೆ. ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರು ನಮ್ಮ ಅತ್ತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು ಹಾಗೂ ಅತ್ಯಂತ ನೆಚ್ಚಿನ ರಾಷ್ಟ್ರ ನಾಯಕರಾಗಿ ಉಳಿದಿರುತ್ತಾರೆ ಎಂದು ರಮಾನಾಥ್ ಕೋವಿಂದ್  ಟ್ವೀಟ್ ನಲ್ಲಿ ಹೇಳಿದ್ದಾರೆ. ಸೇನಾ ಇತಿಹಾಸದ ಏಕೈಕ ಮಹಾ ದಂಡನಾಯಕ, ಯೋಧರ ನಾಡಿನ  ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪಅವರ ಜನ್ಮ ದಿನಾಚರಣೆಯನ್ನು ಕೊಡಗಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಮಡಿಕೇರಿ ನಗರದ ಮುಖ್ಯ ದ್ವಾರದಲ್ಲಿರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಅಪ್ರತಿಮ ವೀರ ಸೇನಾನಿಯನ್ನ ಸ್ಮರಿಸಲಾಗಿದೆ.

About the author

ಕನ್ನಡ ಟುಡೆ

Leave a Comment