ರಾಷ್ಟ್ರ ಸುದ್ದಿ

ಫೆ. 21ರಂದು ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ: ಧರ್ಮ ಸಂಸದ್

ಹೊಸದಿಲ್ಲಿ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಫೆ.21ರಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಲಾಗುವುದು, ಅಂದು ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುವುದು ಎಂದು ಘೋಷಿಸುವ ಮೂಲಕ ಪರಮ ಧರ್ಮ ಸಂಸದ್‌ ಬುಧವಾರ ಕೇಂದ್ರ ಸರಕಾರಕ್ಕೆ ಸವಾಲೆಸಿದಿದೆ. ”ನಾವು ಸರ್ವೋಚ್ಚ ನ್ಯಾಯಾಲಯವನ್ನು ಗೌರವಿಸುತ್ತೇವೆ; ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಗೌರವಿಸುತ್ತೇವೆ. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಕಾಲ ಈಗ ಕೂಡಿ ಬಂದಿದೆ,” ಎಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಎರಡು ದಿನಗಳ ಪರಮ ಧರ್ಮ ಸಂಸತ್‌ನ ಸಮಾರೋಪ ಸಮಾರಂಭದ ಬಳಿಕ ಸ್ವರೂಪಾನಂದ್‌ ಘೋಷಿಸಿದ್ದಾರೆ.

ಫೆ.21ರಂದು ಇಟ್ಟಿಗೆಗಳನ್ನು ಹೊತ್ತು ಅಯೋಧ್ಯೆಗೆ ತೆರಳಿ, ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತೇವೆ. ಇದನ್ನು ತಡೆಯಬಾರದು. ಒಂದು ವೇಳೆ ಇದಕ್ಕೆ ಅಡ್ಡಿಪಡಿಸಿದರೆ, ದೇಶದ ಹಿಂದುಗಳೆಲ್ಲರೂ ಮುನ್ನುಗ್ಗಿ ಬರಬೇಕು,” ಎಂದು ಅವರು ಕರೆ ನೀಡಿದ್ದಾರೆ. ಇದೇ ವೇಳೆ, ಅಯೋಧ್ಯೆಯ ವಿವಾದಿತ ತಾಣದ ಸುತ್ತಮುತ್ತಲಿನ ಅವಿವಾದಿತ 66 ಎಕರೆ ಖಾಲಿ ಭೂಮಿಯನ್ನು ಅದರ ಮೂಲ ಒಡೆತನ ಹೊಂದಿರುವ ರಾಮ ಜನ್ಮಭೂಮಿ ನ್ಯಾಸಕ್ಕೆ ಮರಳಿಸುವ ಬಗ್ಗೆ ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.’

About the author

ಕನ್ನಡ ಟುಡೆ

Leave a Comment