ಕ್ರೈಂ

ಫೇಲಾಗುತ್ತೇನೆಂದು ವಿದ್ಯಾರ್ಥಿನಿ ಆತ್ಮಹತ್ಯೆ

ದಾವಣಗೆರೆ: ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆಂದು ಹೆದರಿ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ನಗರದ ಮಣಿಕಂಠ ಸರ್ಕಲ್ ಬಳಿ ನಡೆದಿದೆ.

ಮೊನ್ನೆಯಷ್ಟೇ ವಿದ್ಯಾರ್ಥಿನಿ ಗಣಿತ ಪರೀಕ್ಷೆ ಬರೆದಿದ್ದು ಮನೆಗೆ ಬಂದು ಪ್ರಶ್ನೆ ಪತ್ರಿಕೆ ಪರಿಶೀಲನೆ ಮಾಡಿದ್ದಳು. ಈ ವೇಳೆ ಅಂಕಗಳು ಕಡಿಮೆ ಬರುತ್ತವೆಂದು ಖಚಿತ ಪಡಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.ಈ ಕುರಿತು  ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

About the author

ಕನ್ನಡ ಟುಡೆ

Leave a Comment