ತಂತ್ರಜ್ಞಾನ ಸುದ್ದಿ

ಫೇಸ್​ಬುಕ್ ಸಂಸ್ಥೆಯಿಂದ ಇನ್ಸ್​ಸ್ಟಾಗ್ರಾಂ ಸಂಸ್ಥಾಪಕರ ನಿರ್ಗಮನ.

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್​​ಬುಕ್ ಸಂಸ್ಥೆಯಿಂದ ಇನ್ಸ್​ಸ್ಟಾಗ್ರಾಂ ಸಂಸ್ಥಾಪಕ ಸಿಇಒ ಕೇವಿನ್ ಸಿಸ್ಟ್ರೋಮ್ ಹಾಗೂ ಸಿಟಿಒ ಮೈಕ್ ಕ್ರೈಗೆರ್ ಹೊರ ನಡೆದಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ತಮ್ಮ ಇನ್ಸ್​ಸ್ಟಾಗ್ರಾಂ ಬ್ಲಾಗ್​ನಲ್ಲಿ ತಿಳಿಸಿರುವ ಸಿಸ್ಟ್ರೋಮ್ ಮತ್ತಷ್ಟು ಸೃಜನಶೀಲತೆಯನ್ನು ಅನ್ವೇಷಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಲು ಯೋಚಿಸುತ್ತಿರುವುದಾಗಿ ತಿಳಿಸಿದ್ದಾರೆ.

ಹೊಸ ವಿಷಯಗಳನ್ನು ನಿರ್ಮಿಸಲು ಹಿಂದಕ್ಕೆ ಹೆಜ್ಜೆ ಇಡಬೇಕಾದ ಅನಿರ್ವಾಯತೆ ಇರುತ್ತದೆ. ಪ್ರಪಂಚದ ಅಗತ್ಯತೆಗಳೇ ನಮಗೆ ಸ್ಪೂರ್ತಿಯಾಗಿದ್ದು, ಅದನ್ನು ಮಾಡಲು ನಾವು ಯೋಚಿಸೋಣ ಎಂದು ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಫೇಸ್​ಬುಕ್​ ಸಂಸ್ಥೆಯಿಂದ ಹೊರ ನಡೆಯುವುದರ ಬಗ್ಗೆ ಯಾವುದೇ ಕಾರಣ ನೀಡಿಲ್ಲ. ಇನ್ನು ಕೆಲವೇ ವಾರಗಳಲ್ಲಿ ಫೇಸ್​ಬುಕ್​ ಕಂಪನಿಯಿಂದ ಈ ಇಬ್ಬರು ನಿರ್ಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

2010ರಲ್ಲಿ ಸಿಸ್ಟ್ರೋಮ್ ಮತ್ತು ಕ್ರೈಗೆರ್ ಇನ್ಸ್​ಸ್ಟಾಗ್ರಾಂನ್ನು ಸ್ಥಾಪಿಸಿದ್ದರು. 2012ರಲ್ಲಿ ಫೇಸ್​ಬುಕ್ ಸ್ಥಾಪಕ ಝುಕರ್ ಬರ್ಗ್ ಒಂದು ಶತಕೋಟಿ ಡಾಲರ್​ಗೆ ಇನ್ಸ್​ಸ್ಟಾಗ್ರಾಂ ಶೇರು ಖರೀದಿಸಿದ್ದರು. ಅಲ್ಲದೇ ಈ ಇನ್ಸ್​ಸ್ಟಾಗ್ರಾಂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬಗ್ಗೆ ಕೂಡ ಈ ಖರೀದಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.

 

About the author

ಕನ್ನಡ ಟುಡೆ

Leave a Comment