ದೇಶ ವಿದೇಶ

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮಾರ್ಕನ್ ಇಂದಿನಿಂದ ಮಾ.12 ರವರೆಗೆ ಭಾರತ ಭೇಟಿ

ದೆಹಲಿ: ಇಂದು ಭಾರತಕ್ಕೆ ಫ್ರಾನ್ಸ್ ಅಧ್ಯಕ್ಷ ಮ್ಯಾನಿಯಲ್ ಮಾರ್ಕನ್ ಬರಲಿದ್ದಾರೆ. ಮಾರ್ಚ್ 12 ರ ವರೆಗೂ ನಾಲ್ಕು ದಿನಗಳ ಕಾಲ ಭಾರತದಲ್ಲಿ ಇರಲಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಮಾರ್ಕನ್ ತಮ್ಮ ಪತ್ನಿ ಬ್ರಿಗಿಟ್ಟೆ ಮತ್ತು ಉದ್ಯಮಿಗಳು ಹಾಗೂ ಸಚಿವಾಯಗಳ ನಿಯೋಗಗಳೊಂದಿಗೆ ಭಾರತದ ಪ್ರವಾಸ ಕೈಗೊಂಡಿದ್ದಾ ರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನ ಮೇರೆಗೆ ಮಾರ್ಕನ್ ಭಾರತಕ್ಕೆ ಬರುತ್ತಿದ್ದಾರೆ.

ಭಾರತ ಹಾಗೂ ಫ್ರಾನ್ಸ್ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಆರ್ಥಿಕ ಹಾಗೂ ರಾಜಕೀಯ ಸಂಬಂಧಗಳ ವೃದ್ಧಿ ನಿಟ್ಟಿನಲ್ಲಿ ಇಮ್ಯಾನುಯಲ್ ಮಾರ್ಕನ್ ಭಾರತ ಪ್ರವಾಸ ಕೈಗೊಂಡಿದ್ದಾರೆ ಎಂದು ಭಾರತ ವಿದೇಶಾಂಗ ಸಚಿವಾಲಯದ  ತಿಳಿಸಿದೆ.

ನಾಲ್ಕು ದಿನಗಳ ಪ್ರವಾಸದಲ್ಲಿ ಮಾರ್ಕನ್ ಅವರು ನಾನಾ  ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಹಾಗೂ ಮಾರ್ಚ್ 12 ರಂದು ವಾರಣಾಸಿಗೆ ಪ್ರಧಾನಿ ಮೋದಿ ಅವರೊಂದಿಗೆ ಭೇಟಿ ನೀಡಲಿದ್ದಾರೆ  ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment