ರಾಜ್ಯ ಸುದ್ದಿ

ಫ್ರೀಡಂ ಪಾರ್ಕ್​ ತಲುಪಿದ ರೈತರ ರ‍್ಯಾಲಿ

ಬೆಂಗಳೂರು: ಕಬ್ಬಿನ ಬಾಕಿ ಬಿಡುಗಡೆ, ಸೂಕ್ತ ಬೆಂಬಲ ಬೆಲೆ, ಸಾಲಮನ್ನಾ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಿ ಎಂದು ರಾಜ್ಯದ ಮೂಲೆ ಮೂಲೆಯಿಂದ ನಗರಕ್ಕೆ ಬಂದಿದ್ದ ಸಾವಿರಾರು ರೈತರು ರೈಲ್ವೆ ನಿಲ್ದಾಣದಿಂದ ಆರಂಭಿಸಿದ್ದ ರ‍್ಯಾಲಿ ಈಗ ಫ್ರೀಡಂ ಪಾರ್ಕ್​ ತಲುಪಿದೆ.

ರೈತರ ರ‍್ಯಾಲಿ ಫ್ರೀಡಂ ಪಾರ್ಕ್​ಗೆ ತಲುಪುತ್ತಿದ್ದಂತೆ ಪೊಲೀಸರು ಅವರನ್ನು ಅಲ್ಲೇ ತಡೆ ಹಿಡಿದಿದ್ದಾರೆ. ಫ್ರೀಡಂ ಪಾರ್ಕ್​ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದು ಅದಕ್ಕೆ ಪೊಲೀಸರು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿದು ಬಂದಿದೆ. ಇದೇ ವೇಳೆ ಮೆಜೆಸ್ಟಿಕ್​, ಕೆ.ಆರ್​.ಸರ್ಕಲ್​ ಮತ್ತು ಫ್ರೀಡಂ ಪಾರ್ಕ್​ ಬಳಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಟ್ರಾಫಿಕ್​ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ರೈತರ ಬೇಡಿಕೆಗಳು ಹೀಗಿವೆ:

1. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು
2. ಗ್ರಾಮೀಣ ಪ್ರದೇಶದ ಆರ್ಥಿಕ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್
3. ರೈತರು ಬೆಳೆದ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು
4. ಕೃಷಿ ಸಾಲ ದೊರಕಿಸಲು ಸರಳ ಸಾಲ ನೀತಿ ಜಾರಿಗೆ ತರಬೇಕು
5. ಬ್ಯಾಂಕ್​ಗಳು ನೀಡುತ್ತಿರುವ ಕಿರುಕುಳಗಳನ್ನು ತಡೆಗಟ್ಟಬೇಕು
6. ಬರಪೀಡಿತ ಪ್ರತಿ ಕೃಷಿ ಕುಟುಂಬಕ್ಕೆ 10 ಸಾವಿರ ರೂ. ಜೀವನ ಭತ್ಯೆ
7. ಪ್ರತಿ ಹೆಕ್ಟೇರ್​ಗೆ 25 ಸಾವಿರ ರೂ. ನಷ್ಟ ಪರಿಹಾರ ನೀಡಬೇಕು
8. ಬೆಂಬಲ ಬೆಲೆಯಲ್ಲಿ ಕೊಳ್ಳಲು ಖರೀದಿ ಕೇಂದ್ರ ಕೂಡಲೇ ತೆರೆಯಬೇಕು
9. ಕೊಡಗು ಪುನರ್ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು
10. KRS ಉಳಿಸಲು ಅಲ್ಲಿನ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು
11. ರೈತರಿಗೆ ಬಗರ್ ಹುಕುಂ ಸಾಗುವಳಿ ಹಕ್ಕುಪತ್ರ ನೀಡಬೇಕು

About the author

ಕನ್ನಡ ಟುಡೆ

Leave a Comment