ಆಹಾರ

ಬಂದಿದೆ ರಾಗಿ ಸಮೋಸ, ಆರೋಗ್ಯಕ್ಕೂ ಇದು ಹಿತ

ಸಮೋಸ ಎಂದರೆ ಸಾಕು ಕೆಲವರಿಗೆ ಆಗಲೇ ತಿಂದು ಬಿಡಬೇಕೆನ್ನಿಸುತ್ತದೆ. ಬಿಸಿ ಬಿಸಿ ಸಮೋಸಾದ ಮಹಿಮೆಯೇ ಹಾಗೆ. ಆದರೆ ಮೈದಾ ಹಿಟ್ಟು, ಆಲೂಗಡ್ಡೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಸಮೋಸಾ ತಿನ್ನಲು ಕೆಲವರು ಹಿಂಜರಿಯುತ್ತಾರೆ.
ಮತ್ತೀಗ ನೀವು ಆ ಚಿಂತೆ ಬಿಡಿ. ರಾಗಿ ಆರೋಗ್ಯಕ್ಕೆ ಪೂರಕ ಎಂಬುದು ನಿಮಗೆ ಗೊತ್ತಿರಲೇ ಬೇಕು. ಹೌದು ಮತ್ತೀಗ ಬಂದಿದೆ ರಾಗಿ ಸಮೋಸ ಮೈದಾ ಕಾರಣಕ್ಕೆ ಸಮೋಸಾ ತಿನ್ನಲು ಹಿಂದೆ- ಮುಂದೆ ನೋಡುವವರು ರಾಗಿ ಹಿಟ್ಟಿನ ಸಮೋಸಾ ತಿನ್ನಬಹುದು.
ರಾಗಿಯಲ್ಲಿ ಗ್ಲುಟೆನ್ ಕೂಡ ಇಲ್ಲದ ಕಾರಣ ಈ ಸಮೋಸಾ ಈಗ ಎಲ್ಲೆಡೆ ಜನಪ್ರಿಯವಾಗಿದ್ದು, ಜನರು ಕೂಡ ಇದರ ರುಚಿಗೆ ಮಾರು ಹೋಗಿದ್ದಾರೆ. ಕಂದು ಬಣ್ಣದ ಈ ಸಮೋಸಾ ಆರೋಗ್ಯಕ್ಕೂ ಉತ್ತಮ. ಯಾಕೆಂದರೆ ಇದರ ಸ್ಟಪ್ಫಿಂಗ್‌ನ್ನು ಕೂಡಾ ಸೌತೆಕಾಯಿ, ಬಟಾಣಿ ಕಾಳು ಮತ್ತು ಗೋಡಂಬಿ ತುಣುಕುಗಳಿಂದ ತಯಾರಿಸಲಾಗುತ್ತದೆ. ಮುಖ್ಯವಾಗಿ ಮಕ್ಕಳಿಗೆ ಈ ರಾಗಿ ಸಮೋಸಾ ಇಷ್ಟ ಕೂಡ ಆಗಬಹುದು ದತೆಗೆ ಹೆಲ್ದಿ ಕೂಡ. ಟೀ ಟೈಮ್‌ಗಂತೂ ರಾಗಿ ಸಮೋಸ ಬೆಸ್ಟ್ ಆಪ್ಸನ್.

About the author

ಕನ್ನಡ ಟುಡೆ

Leave a Comment