ಸಿನಿ ಸಮಾಚಾರ

ಬಜಾರ್ ಚಿತ್ರದ ಸೆಟ್‍ಗೆ ವಿಶೇಷ ಅತಿಥಿಗಳ ಆಗಮನ

ಸ್ಯಾಂಡಲ್ವುಡ್ ನ ನಿರ್ದೇಶಕ ಸುನಿ ಬಜಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದು ಸದ್ಯ ಸೆಟ್‍ಗೆ ವಿಶೇಷ ಅತಿಥಿಗಳ ಆಗಮನವಾಗಿದೆ. ಬಜಾರ್ ಚಿತ್ರದಲ್ಲಿ ಪಾರಿವಾಳಗಳ ಸ್ಪರ್ಧೆಯೊಂದಿದ್ದು ಇದಕ್ಕಾಗಿ ಸುಮಾರು 20 ಪಾರಿವಾಳಗಳನ್ನು ಸೆಟ್‍ಗೆ ತರಲಾಗಿದೆ. ಕಲರ್ ಕಲರ್ ಪಾರಿವಾಳಗಳು ಶೂಟಿಂಗ್ ನಲ್ಲಿ ಭಾಗಿಯಾಗಿವೆ.
ಚಿತ್ರದಲ್ಲಿ ನವನಟ ಧನ್ವೀರ್ ಗೌಡ ಮತ್ತು ಅಧಿತಿ ಪ್ರಭುದೇವ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇನ್ನು ಚಿತ್ರದ ಕುರಿತಂತೆ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಅಧಿತಿ, ಸೆಟ್ ನಲ್ಲಿ ಹಕ್ಕಿಗಳ ಜತೆ ಪರದೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ. ನಾಯಿ, ಗಿಳಿ ಮತ್ತು ಮೊಲಗಳ ಜತೆ ನಾನು ಬೆಳೆದಿದ್ದೇನೆ. ನಮ್ಮ ಮನೆಯಲ್ಲಿ ಅಳಿಲು ಸಹ ಇತ್ತು. ಆದರೆ ಇದೇ ಮೊದಲ ಬಾರಿಗೆ ನಾನು ಪಾರಿವಾಳಗಳ ಜತೆ ಆಡುತ್ತಿರುವುದಾಗಿ ಹೇಳಿದ್ದಾರೆ. ಏಪ್ರಿಲ್ 12ರಿಂದ ಮೂರನೇ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ. ಪಾರಿ ಹೆಸರಿನ ಪಾರಿವಾಳ ಚಿತ್ರದಲ್ಲಿನ ಆಕರ್ಷಣೆ. ನಾಯಕ ನಟ ಧನ್ವೀರ್ ಗೆ ಪಾರಿ ಪಾರಿವಾಳ ಅಚ್ಚುಮೆಚ್ಚಿನದ್ದು ನಾಯಕನ ಗೆಲುವಿನ ಪ್ರಮುಖ ಪಾತ್ರ ವಹಿಸುತ್ತದೆ.

About the author

ಕನ್ನಡ ಟುಡೆ

Leave a Comment