ರಾಜಕೀಯ

ಬಜೆಟ್ ಮಂಡನೆಗೆ ಕ್ಷಣಗಣನೆಗೂ ಮುನ್ನ ಕಾಂಗ್ರೆಸ್ ಶಾಸಕಾಂಗ ಸಭೆ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ 2ನೇ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಬಂಡಾಯ ನಾಯಕರ ಬಿಸಿ ಕೂಡ ಸರ್ಕಾರಕ್ಕೆ ಮುಟ್ಟುತ್ತಿದ್ದು, ಇದೇ ಕಾರಣಕ್ಕೆ ಬಜೆಟ್ ಮಂಡನೆಗೂ ಮುನ್ನ ಕಾಂಗ್ರೆಸ್ ಪಕ್ಷದ ತನ್ನ ಶಾಸಕಾಂಗ ಸಭೆ ಕರೆದಿದೆ. ಮಾಜಿ ಸಿಎಂ ಹಾಗೂ ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇಂದು ಸಿಎಲ್​​​ಪಿ ಸಭೆ ನಡೆಯಲಿದ್ದು, ಎಲ್ಲಾ ಕಾಂಗ್ರೆಸ್​ ಶಾಸಕರು ಕಡ್ಡಯವಾಗಿ ಹಾಜರಾಗಲೇಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಖಡಕ್​​​ ಸಂದೇಶ ರವಾನಿಸಿದ್ದಾರೆ. ಸತತವಾಗಿ ಸಿಎಲ್​​​ಪಿ ಸಭೆಗೆ ಅತೃಪ್ತ ಶಾಸಕರು ಗೈರಾಗುತ್ತಿದ್ದರು. ಕೆಲ ಶಾಸಕರ ಈ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಈ ಶಾಸಕರಿಗೆ ಬಿಸಿ ಮುಟ್ಟಿಸುವ ಸಲುವಾಗಿಯೇ ಸಿದ್ದರಾಮಯ್ಯನವರು ಮತ್ತೊಮ್ಮೆ ಶಾಸಕಾಂಗ ಸಭೆ ಕರೆದಿದ್ದು, ಈ ಬಾರಿಯೂ ಸಭೆಗೆ ಹಾಜರಾಗದೇ ಹೋದರೇ ಶಾಸಕರಿಗೆ ವಿಪ್​​ ಜಾರಿ ಮಾಡಲು ನಿರ್ಧರಿಸಿದ್ಧಾರೆ ಎನ್ನಲಾಗಿದೆ. ಇಂದು ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರದ ಬಜೆಟ್​​ ಮಂಡನೆ ನಡೆಯಲಿದೆ. ಸಿಎಂ ಎಚ್​​.ಡಿ ಕುಮಾರಸ್ವಾಮಿಯವರೇ ಬಜೆಟ್​ ಮಂಡಿಸಲಿದ್ದು, ಹಲವು ಜನಪ್ರಿಯ ಯೋಜನೆ ಘೋಷಿಸುವ ಸಾಧ್ಯತೆಯಿದೆ. ಈ ಮುನ್ನವೇ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪರೇಷನ್​​ ಕಮಲ ಸೇರಿದಂತೆ ಹಲವು ವಿಚಾರಗಳನ್ನು ಇಲ್ಲಿ ಚರ್ಚಿಸಲಿದ್ದಾರೆ. ಒಂದು ವೇಳೆ ಈ ಬಾರಿ ಯಾರೇ ಶಾಸಕರು ಗೈರಾದರು, ಅವರ ವಿರುದ್ಧ ವಿಪ್​​ ಜಾರಿಗೊಳಿಸುವುದಾಗಿ ಖಡಕ್​​ ಸಂದೇಶ ರವಾನಿಸಿದ್ದಾರೆ.

About the author

ಕನ್ನಡ ಟುಡೆ

Leave a Comment