ರಾಷ್ಟ್ರ ಸುದ್ದಿ

ಬಟಾಬಯಲಾಯ್ತು ಪಾಕ್ ನಿಜ ಬಣ್ಣ: ಭಾರತ ಹೊಡೆದುರುಳಿಸಿದ್ದ ಎಫ್16 ವಿಮಾನದ ಅವಶೇಷ ಪಿಓಕೆಯಲ್ಲಿ ಪತ್ತೆ

ಇಸ್ಲಾಮಾಬಾದ್:  ಭಾರತದ ಸುಖೋಯ್ ಯುದ್ಧ ವಿಮಾನ ನಡೆಸಿದ ದಾಳಿಗೆ ಉರುಳಿಬಿದ್ದಿದ್ದ ಪಾಕಿಸ್ತಾನದ ಎಫ್16 ವಿಮಾನದ ಅವಶೇಷ ಇಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತ್ತೆಯಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ(ಪಿಒಕೆ) ಬಳಿ ಇರುವ ಗುಡ್ಡಗಾಡಿನ ಪ್ರದೇಶವೊಂದರಲ್ಲಿ ಎಫ್16 ವಿಮಾನದ ಅವಶೇಷಗಳು ಇಂದು ಪತ್ತೆಯಾಗಿರುವುದನ್ನು ಅಲ್ಲಿನ ಸುದ್ದಿವಾಹಿನಿಗಳು ಪತ್ತೆಹಚ್ಚಿವೆ ಎಂದು ಮೂಲಗಳು ತಿಳಿಸಿವೆ. ದಟ್ಟ ಅರಣ್ಯ ಪ್ರದೇಶವೊಂದರಲ್ಲಿ ಎಫ್16 ವಿಮಾನ ಬಿದ್ದಿರುವುದನ್ನು ಪಾಕಿಸ್ತಾನದ ಸೇನಾಪಡೆ ಅವಲೋಕಿಸುತ್ತಿರುವುದು ಕಂಡುಬಂದಿದೆ.
ನಿನ್ನೆ ಮುಂಜಾನೆ 10.30ಕ್ಕೆ ಪಾಕ್ ವಾಯುಪಡೆಗೆ ಸೇರಿದ ಎಫ್16 ಮೂರು ಯುದ್ಧ ವಿಮಾನಗಳು ಜಮ್ಮುಕಾಶ್ಮೀರದ ನೌಶೇರಾ ಮತ್ತು ಕಿಶಾನ್‍ಗಂಜ್ ಎಂಬಲ್ಲಿ ದಾಳಿ ನಡೆಸಲು ಮುಂದಾಗಿದ್ದವು. ತಕ್ಷಣವೇ ಎಚ್ಚೆತ್ತುಕೊಂಡ ಭಾರತೀಯ ವಾಯುಪಡೆ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಅದರಲ್ಲೂ ಸುಖೋಯ್ ಯುದ್ಧ ವಿಮಾನ ಪಾಕ್‍ನ ಎಫ್16 ವಿಮಾನದ ಬೆನ್ನತ್ತಿ ಪಿಒಕೆ ಬಳಿ ಹೊಡೆದುರುಳಿಸಿತ್ತು. ಪಿಓಕೆಯಲ್ಲಿ ಎಪ್ 16 ವಿಮಾನದ ಅವಶೇಷ ಪತ್ತೆಯಾಗಿದೆ. ಆದರೆ ತನ್ನ ಗಡಿ ಪ್ರದೇಶದಲ್ಲಿ ಯಾವುದೇ ವಿಮಾನವನ್ನು ಹೊಡೆದುರುಳಿಸಿಲ್ಲ ಎಂದು ಪಾಕಿಸ್ತಾನ ಕೊಚ್ಚಿಕೊಳ್ಳುತ್ತಿತ್ತು.

About the author

ಕನ್ನಡ ಟುಡೆ

Leave a Comment