ಸಿನಿ ಸಮಾಚಾರ

ಬದುಕಿನ ಏಳುಬೀಳು ಬಿಚ್ಚಿಡಲು ಪುಸ್ತಕ ಬರೆಯಲಿದ್ದಾರಂತೆ ಕತ್ರೀನಾ !

ಬಾಲಿವುಡ್​  ಬೆಡಗಿ ಕತ್ರೀನಾ ಕೈಫ್ ಪುಸ್ತಕ ಬರೆಯಲು ನಿರ್ಧರಿಸಿದ್ದಾರಂತೆ ! ತಮ್ಮ ಸಿನಿ ಬದುಕಿನ ಏಳುಬೀಳುಗಳನ್ನು ಪುಸ್ತಕದ ಮೂಲಕ ಹಂಚಿಕೊಳ್ಳಲಿದ್ದು ಶೀಘ್ರವೇ ಶುರು ಮಾಡಲಿದ್ದಾರಂತೆ.

ಕತ್ರೀನಾ ಕೈಫ್​ ಮೂಲತಃ ಇಂಗ್ಲಿಷ್​ ನಟಿಯಾಗಿದ್ದು ಬೂಮ್​ ಚಿತ್ರದ ಮೂಲಕ ಬಾಲಿವುಡ್​ ಪ್ರವೇಶಿಸಿದವರು. ಆರಂಭದಲ್ಲಿ ಅವರ ನಟನೆ, ನೃತ್ಯಗಳ ಬಗ್ಗೆ ವ್ಯಾಪಕ ಟೀಕೆ, ವಿಮೆರ್ಶೆಗಳನ್ನು ಎದುರಿಸಿದವರು. ಸಂಪೂರ್ಣ ಹೊಸದಾಗಿರುವ ಬಾಲಿವುಡ್​ನಲ್ಲಿ ನೆಲೆಯೂರಿದ ಬಗ್ಗೆ, ಇಂಡಸ್ಟ್ರಿಯಲ್ಲಿ ಸಾಗಿ ಬಂದ ಪ್ರಯಾಣದ ಬಗ್ಗೆ ಈಗ ಪುಸ್ತಕ ಬರೆಯುವುದಾಗಿ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಜೀವನವನ್ನು ಸರಿದೂಗಿಸಿಕೊಂಡು ಹೋಗುವ ಕಲೆ ಗೊತ್ತಿರಬೇಕು. ಸೋಲು, ಕಠಿಣ ಸಮಯಗಳನ್ನು ಎದುರಿಸಬೇಕು. ನನ್ನ ವಿಚಾರದಲ್ಲಂತೂ ಇವೆಲ್ಲವುಗಳಿಂದ ಬಹುದೊಡ್ಡ ಪಾಠ ಕಲಿತಿದ್ದೇನೆ. ಸೋಲುಗಳೇ ಮೆಟ್ಟಿಲಾದವು. ಒಂದು ಸಲ ಮುನ್ನುಗ್ಗಿದರೆ ಖಂಡಿತವಾಗಿಯೂ ಯಶಸ್ಸು ಸಿಕ್ಕೇ ಸಿಗುತ್ತದೆ ‘ ಎಂದು ಇತ್ತೀಚೆಗೆ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಹೊಸಹೊಸ ಜನರನ್ನು ಅರ್ಥಮಾಡಿಕೊಳ್ಳುತ್ತ ತುಂಬ ಕಲಿಯುತ್ತಿದ್ದೇನೆ. ನನ್ನು ವ್ಯಕ್ತಿತ್ವದಲ್ಲಿ ವಿಕಸನವಾಗುತ್ತಿರುವುದನ್ನು ನಾನೇ ಗುರುತಿಸಿಕೊಂಡಿದ್ದೇನೆ. ಮನಸಿಗೆ ಬಂದ ವಿಚಾರಗಳನ್ನು ಪರಾಮರ್ಶೆ ಮಾಡದೆ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಟೈಗರ್ ಝಿಂದಾ ಹೈನಂತಹ ಬ್ಲಾಕ್​ಬಸ್ಟರ್​ ಚಲನಚಿತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿರುವ ಕತ್ರೀನಾ ಕೈಫ್​ 15 ವರ್ಷಗಳ ವೃತ್ತಿಜೀವನದಲ್ಲೂ ನಾನಾ ಅನುಭವ ಪಡೆದಿದ್ದಾರೆ.

About the author

ಕನ್ನಡ ಟುಡೆ

Leave a Comment