ಸಿನಿ ಸಮಾಚಾರ

ಬದುಕುಳಿಯುವುದು ಶೇ.30ರಷ್ಟು ಮಾತ್ರ ಅಂದಿದ್ದರು ವೈದ್ಯರು: ಸೋನಾಲಿ ಬೇಂದ್ರೆ

ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಕಳೆದ ವರ್ಷ ಜುಲೈನಲ್ಲಿ ತಮ್ಮ ಅನಾರೋಗ್ಯದ ಸ್ಥಿತಿಯನ್ನು ಬಹಿರಂಗಪಡಿಸಿದ್ದರು. ಚಿಕಿತ್ಸೆಗಾಗಿ ನ್ಯೂಯಾರ್ಕ್‍ಗೆ ಹೋಗುತ್ತಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲೇ ಅವರಿಗೆ ಕೆಲವು ತಿಂಗಳ ಕಾಲ ಚಿಕಿತ್ಸೆ ಪಡೆದರು. ಆದರೆ ತಾನು “ಸತ್ತೇ ಹೋಗುತ್ತೇನೇನೋ” ಎಂಬ ಆಲೋಚನೆ ತನಗೆ ಎಂದೂ ಬರಲಿಲ್ಲ ಎಂದಿದ್ದಾರೆ.

ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, “ನನ್ನ ಉದರ ಭಾಗದಲ್ಲಿ ಕ್ಯಾನ್ಸರ್‌ ಕಣಗಳು ಸಂಪೂರ್ಣ ವ್ಯಾಪಿಸಿವೆ ಎಂದು ಸ್ಕ್ಯಾನ್ ಮೂಲಕ ಗೊತ್ತಾದಾಗ, ಬದುಕುಳಿಯುವ ಪ್ರಮಾಣ ಶೇ.30ರಷ್ಟು ಮಾತ್ರ ಇದೆ ಎಂದು ನ್ಯೂಯಾರ್ಕ್ ವೈದ್ಯರು ತಿಳಿಸಿದಾಗ ನಮ್ಮ ಹೃದಯ ನುಚ್ಚು ನೂರಾಯಿತು. ಆದರೆ ಸತ್ತೇ ಹೋಗುತ್ತೇನೆ ಎಂಬ ಆಲೋಚನೆ ನನಗೆ ಬರಲಿಲ್ಲ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ತುಂಬಾ ದಿನ ಬೇಕಾಗುತ್ತದೆ ಎಂಬ ಸಂಗತಿ ಮಾತ್ರ ಅರ್ಥವಾಯಿತು. ಆದರೆ ಜೀವ ಹೋಗುತ್ತದೆ ಎಂದು ಎಂದೂ ಭಯ ಬೀಳಲಿಲ್ಲ” ಎಂದು ತಾನು ಅನುಭವಿಸಿದ ಯಾತನಾಮಯ ಜೀವನದ ಬಗ್ಗೆ ತಿಳಿಸಿದ್ದಾರೆ.

ಆ ಸಮಯದಲ್ಲಿ ಕುಟುಂಬಿಕರು, ಸ್ನೇಹಿತರೇ ನನ್ನ ಬಲ. ಈಗ ನಾನು ನನ್ನ ದೇಹದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇನೆ. ಸಣ್ಣಪುಟ್ಟ ಬದಲಾವಣೆಗಳ ಬಗ್ಗೆ ಕೇರ್ ತಗೊಳ್ಳುತ್ತಿದ್ದೇನೆ” ಎಂಬ ಮಾಹಿತಿ ನೀಡಿದ್ದಾರೆ. “ಇದು ಒಂದು ಹೊಸ ಪಯಣ. ಕ್ಯಾನ್ಸರ್‌ ಜತೆಗೆ ಹೋರಾಡುತ್ತಿರುವ ಮಹಿಳೆಯರಿಗೆ ನಾನು ಒಂದೇ ಒಂದು ಮಾತು ಹೇಳಬೇಕೆಂದಿದ್ದೇನೆ. ಹೆಚ್ಚು ಕಾಳಜಿ ಅಗತ್ಯ, ಬೆಂಬಲ ಅಗತ್ಯ. ನಿಮ್ಮ ಸುತ್ತಲೂ ಸ್ನೇಹಿತರು, ಕುಟುಂಬಿಕರು ಇರುವಂತೆ ನೋಡಿಕೊಳ್ಳಿ. ಇದು ಪ್ರೀತಿ, ಅನುರಾಗ ಪಡೆಯಬೇಕಾದ ಸಮಯ” ಎಂದು ಸೋನಾಲಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment