ಕ್ರೀಡೆ

ಬಲಿಷ್ಠ ಟೀಂ ಇಂಡಿಯಾ ವಿರುದ್ಧ ಸರಣಿ ಗೆಲ್ಲುವ ಅದೃಷ್ಠ ಪ್ರತಿ ಸಾರಿ ಸಿಗುವುದಿಲ್ಲ: ಕ್ರಿಕೆಟಿಗ ಬೆನ್ ಮ್ಯಾಕ್

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 4 ರನ್ ಗಳಿಂದ ವಿರೋಚಿತ ಸೋಲು ಕಂಡಿದ್ದು ಪ್ರತಿ ಸಾರಿ ಬಲಿಷ್ಠ ಟೀಂ ಇಂಡಿಯಾ ವಿರುದ್ಧ ಗೆಲ್ಲುವ ಅವಕಾಶಗಳು ಸಿಗುವುದಿಲ್ಲ ಎಂದು ಆಸ್ಟ್ರೇಲಿಯಾದ ಕ್ರಿಕೆಟಿಗ ಬೆನ್ ಮ್ಯಾಕ್ ಡೆರ್ಮೊಟ್ ಹೇಳಿದ್ದಾರೆ.
ಬಲಿಷ್ಠ ಭಾರತದಂತ ತಂಡದ ವಿರುದ್ಧ ಸೆಣಸಿ ಆಸ್ಟ್ರೇಲಿಯಾಕ್ಕಾಗಿ ಸರಣಿ ಗೆಲ್ಲುವ ಅವಕಾಶ ಪ್ರತಿ ಬಾರಿ ಸಿಗುವುದಿಲ್ಲ. ಸದ್ಯ 1-0 ಅಂತರದಿಂದ ನಾವು ಮುಂದಿದ್ದು ಇನ್ನುಳಿದಿರುವ ಪಂದ್ಯವನ್ನು ಗೆಲ್ಲಬೇಕಿದೆ ಎಂದು ಬೆನ್ ಹೇಳಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಇನ್ನು ನಿನ್ನೆ ನಡೆದ ಎರಡನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಒಟ್ಟಾರೆ ನಾಳೆ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ ಸರಣಿ ಗೆಲ್ಲಲಿದೆ. ಇನ್ನು ಭಾರತ ಗೆದ್ದರೆ ಸರಣಿಯಲ್ಲಿ ಸಮಬಲ ಸಾಧಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಣಿ ಸೋಲು ತಪ್ಪಿಸಿಕೊಳ್ಳಲು ಭಾರತ ನಾಳಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿರ್ವಾಯವಾಗಿದೆ.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯ ಮಳೆಯ ಕಾರಣ ರದ್ದಾಗಿದೆ. ಈ ಮೂಲಕ ಟೀಂ ಇಂಡಿಯಾದ ಸತತ ಎಂಟನೇ ಸರಣಿ ಗೆಲುವಿನ ಆಸೆಗೆ ತಣ್ಣೀರೆರಚಿದಂತಾಗಿದೆ. ಮಳೆಯ ಕಾರಣ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಫಲಿತಾಂಶ ರಹಿತ ಡ್ರಾ ಎಂದು ಘೋಷಣೆಯಾಗಿದ್ದು ಎರಡೂ ತಂಡಗಳು ಸಮಾನ ಅಂಕವನ್ನು ಹಂಚಿಕೊಂಡಿದೆ.

About the author

ಕನ್ನಡ ಟುಡೆ

Leave a Comment