ರಾಜ್ಯ ಸುದ್ದಿ

ಬಳ್ಳಾರಿಯಲ್ಲಿ ಇಂದಿನಿಂದ ಹಂಪಿ ಉತ್ಸವ

ಹಂಪಿ: ಹಲವು ತಿಂಗಳುಗಳಿಂದ ವಿಳಂಬವಾಗಿದ್ದ ಹಂಪಿ ಉತ್ಸವ ಕೊನೆಗೂ ಶನಿವಾರದಿಂದ ಆರಂಭವಾಗಿದೆ. ಬಳ್ಳಾರಿ ಜನತೆಯ ಪ್ರತಿಭಟನೆಗೆ ಫಲ ಸಿಕ್ಕಿದೆ. ಹಂಪಿ ಉತ್ಸವದ ಹಿನ್ನಲೆಯಲ್ಲಿ ಸ್ಮಾರಕಗಳು ಬಣ್ಣಗಳಿಂದ ರಂಗೇರಿವೆ. ಈ ವರ್ಷ ಎಂದಿಗಿಂತ ಒಂದು ದಿನ ಕಡಿಮೆ ಉತ್ಸವ ನಡೆಯಲಿದೆ. ವೇದಿಕೆಯ ಸಂಖ್ಯೆ 5ಕ್ಕೆ ಇಳಿದಿದೆ. 2017ನೇ ಇಸವಿಯಲ್ಲಿ ಹಂಪಿ ಉತ್ಸವಕ್ಕೆ ಏಳು ವೇದಿಕೆಗಳು ಸಜ್ಜಾಗಿದ್ದವು. ಹಂಪಿ ಉತ್ಸವದ ಮುಖ್ಯ ವೇದಿಕೆ ಇದಿರು ಬಸವಣ್ಣದಲ್ಲಿದ್ದು ಮತ್ತೆರಡು ವೇದಿಕೆಗಳು ವಿರುಪಾಕ್ಷ ದೇವಾಲಯ ಮತ್ತು ಕಡಲೆಕಾಳು ಗಣೇಶನಲ್ಲಿ ನಿರ್ಮಿಸಲಾಗಿದೆ. ರಥನಕೂಟ ಮತ್ತು ಮಹಾನವಮಿ ದಿಬ್ಬದಲ್ಲಿ ಧ್ವನಿ, ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯವಾಗಿ ಹಂಪಿ ಉತ್ಸವ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಬೇಸಿಗೆಯಲ್ಲಿರುವುದರಿಂದ ಜನತೆ ಬಳ್ಳಾರಿಯ ಬಿಸಿಲಿನಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆಯಿದೆ.

About the author

ಕನ್ನಡ ಟುಡೆ

Leave a Comment