ರಾಜಕೀಯ

ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ವಿ.ಸೋಮಣ್ಣ, ಜನಾರ್ಧನ ರೆಡ್ಡಿಯ ಈ ಹೇಳಿಕೆ

ಬೆಂಗಳೂರು: ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಗೆ ಮಾಜಿ ಸಚಿವರುಗಳಾದ ಜನಾರ್ಧಾನ ರೆಡ್ಡಿ ಮತ್ತು ವಿ.ಸೋಮಣ್ಣ ಅವರ ಅಪದ್ಧ ಹೇಳಿಕೆಗಳು ಕಾರಣ ಎಂದು ಹೇಳಲಾಗುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾಪಗಳಿಂದಾಗಿ ಅವರ ಮಗ  ರಾಕೇಶ್ ಸಿದ್ದರಾಮಯ್ಯ ಸತ್ತ ಎಂದು  ಜನಾರ್ದನ ರೆಡ್ಡಿ ಹೇಳಿದ್ದಾರೆ. ಇನ್ನೂ ಬಳ್ಳಾರಿ ಅಭ್ಯರ್ಥಿ ಜೆ.ಶಾಂತಾ ಅವರ ಪರ ಪ್ರಚಾರ ಮಾಡುವಾಗ ವಿ. ಸೋಮಣ್ಣ, ನಾಯಕ ಸಮುದಾಯದ ಮುಂದಿನ ಮುಖ್ಯಮಂತ್ರಿ ಶ್ರೀರಾಮುಲು ಅವರು ಎಂದು ಹೇಳಿಕೆ ನೀಡಿದ್ದರು.

ಇತ್ತೀಚೆಗೆ ನಡೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಹಾಗೂ ತಪ್ಪುಗಳನ್ನು ಬಿಜೆಪಿ ಪರಾಮರ್ಶಿಸಿದ್ದು, ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಬದಿಗೊತ್ತುತ್ತಿರುವುದನ್ನು ವಿರೋಧಿಸಿರುವ ಲಿಂಗಾಯತರು ಕಾಂಗ್ರೆಸ್ ಗೆ ಮತ ನೀಡಿದ್ದಾರೆ, ಹಾಗೆಯೇ ಜನಾರ್ದನ ರೆಡ್ಡಿ ನೀಡಿದ ಹೇಳಿಕೆ ಕೇವಲ ಕುರುಬ ಮತದಾರರು ಮಾತ್ರವಲ್ಲ,  ಕಾಂಗ್ರೆಸ್ ಗೆ ನಾಯಕ ಸಮುದಾಯದವರ ಮತಗಳನ್ನು ಸೆಳೆಯಲು ಕಾರಣವಾಯಿತು, ಜೊತೆಗೆ ಬಳ್ಳಾರಿಯಲ್ಲಿ ಶ್ರೀರಾಮುಲು ಒನ್ ಮ್ಯಾನ್ ಶೋ ಕೂಡ ಸೋಲಿಗೆ ಕಾರಣ ಎಂದು ಹೇಳಲಾಗಿದೆ.
ಆದರೆ ಮಂಡ್ಯ ಲೋಕಸಬೆ ಕ್ಷೇತ್ರದಲ್ಲಿ ಬಿಜೆಪಿ ಗಣನೀಯ ಸಾಧನೆ ಮಾಡಿದೆ,.ಹೊಸ ಮುಖ ಡಾ.,ಸಿದ್ದರಾಮಯ್ಯ ಮಂಡ್ಯ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದು ಬಿಜೆಪಿ ಆಂತರಿಕ ವರದಿ ಹೇಳಿದೆ.

About the author

ಕನ್ನಡ ಟುಡೆ

Leave a Comment