ರಾಜಕೀಯ

ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ: ಡಿ.ಕೆ. ಶಿವಕುಮಾರ್‌ ಬಿಸಿತುಪ್ಪವಾಯ್ತು ಬಳ್ಳಾರಿ

ಬೆಂಗಳೂರು: ಹೈಕಮಾಂಡ್‌ ಪ್ರತಿನಿಧಿ ನೇತೃತ್ವದ ಸಭೆ ಬಳಿಕವೂ ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. ಕ್ಷೇತ್ರದ ಉಮೇದುವಾರರ ಆಯ್ಕೆ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ವಹಿಸಲಾಗಿದೆ. ಹೀಗಾಗಿ ಬುಧವಾರ  ಸಚಿವ ಡಿ,ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿದೆ. ನಾಗೇಂದ್ರ ಮತ್ತು ತುಕರಾಂ ಸೇರಿ ಆರು ಶಾಸಕರು ಸಭೆಯಿಂದ ದೂರ ಉಳಿದಿದ್ದರು. ಹೀಗಾಗಿ ಇಂದು ಮತ್ತೆ ಸಭೆ ಕರೆದಿದ್ದು ಇಂದು ಅಭ್ಯರ್ಥಿ ಫೈನಲ್ ಆಗುವ ಸಾಧ್ಯತೆಯಿದೆ.
ಕಾಂಗ್ರೆಸ್ಸಿನ ಭದ್ರಕೋಟೆ ಬಳ್ಳಾರಿ. ಆದರೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಸಿಗದಿರುವುದು ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇತ್ತ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ವಾಗ್ದಾಳಿ, ಬಳ್ಳಾರಿ ಅಭ್ಯರ್ಥಿಯ ಆಯ್ಕೆ ವಿಚಾರದ ಮೇಲೆ ಪರಿಣಾಮ ಬೀರಿದೆ.

About the author

ಕನ್ನಡ ಟುಡೆ

Leave a Comment