ಅ೦ತರಾಷ್ಟ್ರೀಯ

ಬಾಂಗ್ಲಾದಲ್ಲಿ ಶಿವನ ದೇಗುಲ ಧ್ವಂಸ, ಅರ್ಚಕರ ಕುಟುಂಬದ ಮೇಲೆಯೂ ದಾಳಿ

ಢಾಕಾ: ಬಾಂಗ್ಲಾದಲ್ಲಿ ದುಷ್ಕರ್ಮಿಗಳು ಮತ್ತೆ ಹಿಂದೂ ದೇವಾಲಯವೊಂದರ ಮೇಲೆ ದಾಳಿ ನಡೆಸಿದ್ದಾರೆ. ಎರಡು ಗುಂಪುಗಳ ನಡುವಿನ ಘರ್ಷಣೆ ವೇಳೆ ಶಿವಮಂದಿರವೊಂದನ್ನು ನಾಶ ಮಾಡಿರುವ ದುಷ್ಕರ್ಮಿಗಳು, ಅರ್ಚಕರ ಕುಟುಂಬದ ಮೇಲೆಯೂ ಹಲ್ಲೆ ನಡೆಸಿ ಅಟ್ಟಹಾಸ ಮೆರೆದ ಘಟನೆ ತಂಗೈಲ್ ಜಿಲ್ಲೆಯಲ್ಲಿ ನಡೆದಿದೆ. ಬತ್ರಾ ಗ್ರಾಮದಲ್ಲಿ 9 ಜನರ ಗುಂಪೊಂದು ದಾಳಿ ನಡೆಸಿ ಶಿವನ ದೇಗುಲವನ್ನು ಧ್ವಂಸಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

20 ವರ್ಷಗಳ ಹಿಂದೆ ಚಿತ್ತರಂಜನ್ ಎಂಬವರು ಜಮೀನೊಂದನ್ನು ಸ್ವಾಧೀನಪಡಿಸಿಕೊಂಡು, ಅಲ್ಲಿ ಶಿವನ ದೇವಾಲಯ ನಿರ್ಮಾಸಿ ಆರಾಧಿಸುತ್ತಿದ್ದರು. ಆದರೆ, ಅದೇ ಗ್ರಾಮದ ದುಷ್ಕರ್ಮಿಗಳ ಗುಂಪೊಂದು ರಂಜನ್ ಹಾಗೂ ಅವರ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದು, ದೇಗುಲ ಇರುವ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳುಲು ಯತ್ನಿಸಿದೆ ಎಂದು ವರದಿಯಾಗಿದೆ. 20 ವರ್ಷಗಳಿಂದ ಇಲ್ಲಿಯ ಜನರು ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ, ಸ್ಥಳೀಯ ದುಷ್ಕರ್ಮಿಗಳು ದೇವಾಲಯದ ಜಾಗವನ್ನು ಬಲವಂತವಾಗಿ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ರಂಜನ್ ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಘಟನೆ ಸಂಬಂಧ ಇಲ್ಲಿಯವರೆಗೂ ಯಾರೊಬ್ಬರ ಮೇಲೆಯೂ ಪ್ರಕರಣ ದಾಖಲಿಸಿಲ್ಲ ಎಂದು ಹೇಳಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment