ಕ್ರೀಡೆ

ಬಾಂಗ್ಲಾ ವಿರುದ್ಧ ಪಾಕ್ ಹೀನಾಯ ಸೋಲು

ದುಬೈ: ಏಷ್ಯಾಕಪ್ ಸೂಪರ್ 4ರ ಹಂತದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿರುವುದಕ್ಕೆ ಪಾಕ್ ಅಭಿಮಾನಿಗಳು ಅಸಮಾಧಾನಗೊಂಡಿದ್ದು ಅಲ್ಲದೇ ಟೀಂ ಇಂಡಿಯಾ ವಿರುದ್ಧ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಂಡಿದ್ದೇವೆ ಎಂದು ಹೇಳಿ ತಂಡಕ್ಕೆ ಶುಭಕೋರಿದ್ದಾರೆ.
ಬಾಂಗ್ಲಾದೇಶ ನೀಡಿದ 239 ರನ್ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ಪಂದ್ಯದ ಆರಂಭಿಕ 4 ಓವರ್ ಗಳಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸೋಲು ಖಚಿಪಡಿಸಿತ್ತು. ಇದರ ಬೆನ್ನಲ್ಲೇ ಸೋಲು ಖಚಿತಪಡಿಸಿಕೊಂಡ ಅಭಿಮಾನಿಗಳು ಟ್ರೋಲ್ ಆರಂಭಿಸಿದ್ದರು. ಇನ್ನು ತಂಡದ ನಾಯಕ ಸರ್ಫರಾಜ್ ಖಾನ್ ವಿರುದ್ಧ ಅಸಮಾಧಾಗೊಂಡಿರುವ ಅಭಿಮಾನಿಗಳು ನಾಯಕತ್ವದಿಂದ ಕೆಳಗಿಳಿಸುವಂತೆ ಪಾಕ್ ಕ್ರಿಕೆಟ್ ಮಂಡಳಿಯನ್ನು ಆಗ್ರಹಿಸಿದ್ದಾರೆ. ಪಾಕಿಸ್ತಾನ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ 37 ರನ್ ಗಳಿಂದ ಸೋಲುಂಡು ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತು. ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕ್ ಜಯಗಳಿಸಿದ್ದರೆ 3ನೇ ಬಾರಿ ಟೀಂ ಇಂಡಿಯಾ ವಿರುದ್ಧ ಸೋಲುತಿತ್ತು ಎಂದು ಅಭಿಮಾನಿಗಳು ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
 

About the author

ಕನ್ನಡ ಟುಡೆ

Leave a Comment