ರಾಜ್ಯ ಸುದ್ದಿ

ಬಾಗಲಕೋಟೆ: ಪೆನ್ನಿನ ಕ್ಯಾಪ್ ನುಂಗಿ ಬಾಲಕ ಸಾವು

ಬಾಗಲಕೋಟೆ: ಪೆನ್ನಿನ ಕ್ಯಾಪ್ ನುಂಗಿ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಲಕನ ಹೆತ್ತವರು ವೈದ್ಯರ ನಿರ್ಲಕ್ಷವೇ ಹುಡುಗನ ಸಾವಿಗೆ ಕಾರಣ ಎಂದು ಆರೋಪಿಸಿದ್ದು ಆಸ್ಪತ್ರೆ ಎದುರು ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ.
ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಮುತ್ತಪ್ಪ ಬಿರೋಜಿ (9)  ಎಂಬ ಬಾಲಕ ನಾಲ್ಕು ದಿನದ ಹಿಂದೆ ಪೆನ್ನಿನ ಕ್ಯಾಪ್ ನುಂಗಿದ್ದ. ಈತನನ್ನು ನಾನಾ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದ ಪೋಷಕರು ಮಂಗಳವಾರ ಸಂಜೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಶಸ್ತ್ರಚಿಕಿತ್ಸೆ ವೇಳೆ ಬಾಲಕ ಸಾವನ್ನಪ್ಪಿದ್ದಾನೆ. ವೈದ್ಯರ ನಿರ್ಲಕ್ಷದಿಂದ ಬಾಲಕ ಸತ್ತಿದ್ದಾನೆ ಎಂದು ಆರೋಪಿಸಿದ ಪೋಷಕರು ಬಾಲಕನ ಶವವನ್ನು ಆಸ್ಪತ್ರೆ ಎದುರಿಟ್ಟು ಪ್ರತಿಭಟನೆ ಕೈಗೊಂಡಿದ್ದರು. ಘಟನೆ ಮಾಹಿತಿ ತಿಳಿದ ಮಧೋಳ ನಗರ ಪೋಲೀಸರು ಸ್ಥಳಕ್ಕೆ ಧಾವಿಸಿ ಪೋಷಕರ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೆ ಪೋಷಕರು “ಇದ್ದೊಬ್ಬ ಮಗನ ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಕ್ರ್ಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ನಡೆಸಿದ್ದಾರೆ.

About the author

ಕನ್ನಡ ಟುಡೆ

Leave a Comment