ರಾಜ್ಯ ಸುದ್ದಿ

ಬಾಗಲಕೋಟೆ: ದಲಿತ ಯುವಕರಿಂದ ಅಂಬೇಡ್ಕರ್‌ಗೆ ಅವಮಾನ

ತೇರದಾಳ(ಬಾಗಲಕೋಟ): ಜ.18ರಂದು ಸಮೀಪದ ಸಸಾಲಟ್ಟಿ ಗ್ರಾಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಸಾಲಟ್ಟಿ ಗ್ರಾಮದವರಾದ ರಘು ಸರಿಕರ (30), ದಶರಥ ಯಮನಪ್ಪ ಕಾಂಬಳೆ (32) ಹಾಗೂ ಜ್ಞಾನೇಶ್ವರ ಶಿವಪ್ಪ ರಾಯಣ್ಣವರ (31)ಡಾ.ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡಿದ ಬಂಧಿತರು.

ಘಟನೆ ವಿವರ: ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅಡಚಣೆ, ಗ್ರಾಪಂ ಅಧಿಕಾರಿಗಳಿಗೆ ಕಿರಿಕಿರಿ ನೀಡುವುದು, ಮಾಹಿತಿ ಹಕ್ಕು ಅರ್ಜಿ ನೀಡಿ ಕಮಿಷನ್‌ ಕೇಳುವುದು ಮಾಡುತ್ತಿದ್ದರು. ಇದು ಕೆಲ ದಿನಗಳಿಂದ ಸ್ಥಗಿತಗೊಂಡಿದ್ದರಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಹೆದರಿಸಲು ಮತ್ತು ಗ್ರಾಮದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ವೈಷಮ್ಯ ಉಂಟಾಗುವಂತೆ ಮಾಡಲು ವೈಯಕ್ತಿಕ ಹಿತಾಸಕ್ತಿಗೋಸ್ಕರ ಈ ಕೃತ್ಯ ಎಸೆಗಿದ್ದಾರೆಂದು ತನಿಖೆ ನಡೆಸುವ ವೇಳೆ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment