ರಾಜ್ಯ ಸುದ್ದಿ

ಬಾಗಲಕೋಟ: ವಾಲ್ಮೀಕಿ ಸಮುದಾಯಕ್ಕೆ ಸಿದ್ದರಾಮಯ್ಯ ಅಪಮಾನ

ಬಾಗಲಕೋಟ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶ್ರೀರಾಮುಲು ಅವರ ಬಗ್ಗೆ ಸರಿಯಾಗಿ ಅರಿಯದೆ ಅವರ ವಿರುದ್ಧ 420 ಶಬ್ದ ಬಳಸಿದ್ದು ಇಡೀ ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಜಮಖಂಡಿ ಕ್ಷೇತ್ರದ ಹುನ್ನೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,”ಕುಮಾರಸ್ವಾಮಿ ಆ್ಯಂಡ್‌ ಕಂಪನಿ ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ. ರೈತರ ಸಾಲಮನ್ನಾ ಮಾಡುತ್ತೇವೆಂದು ಹೇಳಿದ್ದರೂ ಅದು ಕಾಗದದ ರೂಪದಲ್ಲಿದೆಯೇ ಹೊರತು ರೈತರಿಗೆ ಇಂದಿಗೂ ಪ್ರಯೋಜನವಾಗಿಲ್ಲ. ಪ್ರತಿ ದಿನ ರೈತ ದಾಖಲೆ ನೀಡುವುದರಲ್ಲೇ ಹತಾಶನಾಗಿದ್ದಾನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಪ್ಪಮಕ್ಕಳು ಸೇರಿ ಚಾಮುಂಡೇಶ್ವರಿಯಲ್ಲಿ ಸೋಲುಣಿಸಿದರು. ಅದು ಸಿದ್ದರಾಮಯ್ಯ ಹಾಗೂ ಹಾಲುಮತ ಜನಾಂಗಕ್ಕೆ ಮಾಡಿದ ಮೋಸವಲ್ಲವೆ. ಅಪ್ಪಮಕ್ಕಳ ಮೋಸ ಅರಿತಿದ್ದರೂ ಅವರೊಂದಿಗೆ ಕೈಜೋಡಿಸಿದ್ದಾರೆ. ಇದು ಅವರನ್ನೇ ಮೂಲೆಗುಂಪು ಮಾಡುವುದರಲ್ಲಿ ಸಂಶಯವಿಲ್ಲ ,”ಎಂದರು.

‘ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶ್ರೀರಾಮುಲು ಅವರ ವಿರುದ್ಧ 420 ಪದ ಬಳಸಿದ್ದಾರೆ. ಇದು ಕೇವಲ ರಾಮುಲು ಅವರಿಗಷ್ಟೆ ಅಲ್ಲ. ಇಡೀ ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು ಕೂಡಲೆ ಆ ಸಮುದಾಯದ ಕ್ಷಮೆ ಕೇಳಬೇಕು. ಈಗಾಗಲೆ ನಿಮ್ಮ ಪಕ್ಷದ ನಾಯಕರೇ ರಾಹುಲ್‌ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪುತ್ತಿಲ್ಲ. ಇಡೀ ವಿಶ್ವವೇ ಮೋದಿ ಅವರನ್ನು ಒಪ್ಪಿದೆ. 3 ಲೋಕಸಭೆ ಉಪಚುನಾವಣೆಗಳನ್ನು ಗೆದ್ದು ಪ್ರಧಾನಿಗೆ ಕೊಡುಗೆ ನೀಡುವುದಲ್ಲದೆ ಮುಂಬರುವ ಲೋಕಸಭೆಗೆ ರಾಜ್ಯದಿಂದ 23 ಸಂಸದರನ್ನು ಗೆಲ್ಲಿಸಿ ಕಳುಹಿಸುತ್ತೇವೆ,” ಎಂಬ ವಿಶ್ವಾಸ ವ್ಯಕ್ತಪಡಿಸಿದರು.

About the author

ಕನ್ನಡ ಟುಡೆ

Leave a Comment