ರಾಜಕೀಯ

ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಕಣಕ್ಕೆ?

ಬಾಗಲಕೋಟೆ: ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಭಾರೀ ಕುತೂಹಲ ಇರುವ ಬೆನ್ನಲ್ಲೇ ಇವರ ವಿರುದ್ಧ ಸ್ಪರ್ಧಿಸಲು ಬಿಜೆಪಿಯಿಂದ ಶ್ರೀರಾಮುಲು ಕಣಕ್ಕಿಳಿಸಲು ಚಿಂತನೆ ನಡೆಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕಮಲ ಪಾಳಯದಲ್ಲಿ ಈ ಕುರಿತು ಗಂಭೀರ ಚಿಂತನೆ ನಡೆಯುತ್ತಿದ್ದು, ವೀರಶೈವ-ಲಿಂಗಾಯತ ಮತಗಳ ವಿಭಜನೆ ಮಾಡಲು ಈ ಮಾಸ್ಟರ್​ ಪ್ಲ್ಯಾನ್‌​ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಹಾಲುಮತ ಸಮಾಜದ ಬಳಿಕ ವಾಲ್ಮೀಕಿ ಮತದಾರರು ಹೆಚ್ಚಾಗಿದ್ದು, ಅವರ ಮತವನ್ನು ಬಿಜೆಪಿ ಕಡೆ ಸೆಳೆಯುವ ಲೆಕ್ಕಾಚಾರ ಹಾಕಿ ಶ್ರೀರಾಮುಲುರನ್ನು ಕಣಕ್ಕಿಳಿಸುವ ಚಿಂತನೆ ನಡೆಸುತ್ತಿದ್ದಾರೆ. ಒಂದುವೇಳೆ, ಸಿದ್ದರಾಮಯ್ಯ ಬಾದಾಮಿಯಿಂದ ದೂರ ಉಳಿದರೆ ಆಗ ಶ್ರೀರಾಮುಲು ಸಹ ಮೊಳಕಾಲ್ಮೂರು ಕ್ಷೇತ್ರದಲ್ಲಷ್ಟೇ ಸ್ಪರ್ಧೆ ಮಾಡಲಿದ್ದಾರೆ. ಇಲ್ಲವಾದಲ್ಲಿ ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ಕ್ಷೇತ್ರದಿಂದ ಶ್ರೀರಾಮುಲು ಸ್ಪರ್ಧಿಸಲಿದ್ದಾರೆ.

About the author

ಕನ್ನಡ ಟುಡೆ

Leave a Comment