ರಾಜ್ಯ ಸುದ್ದಿ

ಬಾದಾಮಿ ಬನಶಂಕರಿ ಮಹಾರಥೋತ್ಸವ ಇಂದು

ಬಾದಾಮಿ: ಇಲ್ಲಿಯ ಇತಿಹಾಸ ಪ್ರಸಿದ್ಧ  ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ ನಿಮಿತ್ತ ಜ.21ರಂದು ಸಂಜೆ 5 ಗಂಟೆಗೆ ನಾಡಿನ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಮಹಾರಥೋತ್ಸವ ಜರುಗಲಿದೆ. ಜ.25ರಂದು ಕಳಸ ಇಳಿಯುವ ಕಾರ್ಯಕ್ರಮ ಜರುಗಲಿದೆ. ನಿರಂತರ ಒಂದು ತಿಂಗಳ ಕಾಲ ನಡೆಯುವ ಜಾತ್ರೆಗೆ ಉತ್ತರ ಕರ್ನಾಟಕ ಸೇರಿ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯದಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಬಾದಾಮಿಯಿಂದ 5 ಕಿ.ಮೀ. ದೂರದಲ್ಲಿರುವ ಬನಶಂಕರಿ ಕ್ಷೇತ್ರ, ಪ್ರಾಚೀನ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಕ್ರಿ.ಶ.1019ರ ರಾಷ್ಟ್ರಕೂಟರ ಕಾಲದ ಶಾಸನದಲ್ಲಿ ಇದನ್ನು “ಬನದದೇವಿ’ ಎಂದು ಬಣ್ಣಿಸಲಾಗಿದೆ. ಈ ದೇವಾಲಯ ಇದಕ್ಕೂ ಮೊದಲೇ ಅಸ್ತಿತ್ವದಲ್ಲಿರುವ ಸಾಧ್ಯತೆಯಿದೆ. ಕ್ರಿ.ಶ.1533ರ ವಿಜಯನಗರ ಅಚ್ಯುತರಾಯನ ಶಾಸನದಲ್ಲೂ ದೇವಿಯನ್ನು “ಬನದ ಮಹಾಮಾಯೆ’ಎಂದು ಕರೆಯಲಾಗಿದೆ. ಬನಶಂಕರಿಯಲ್ಲಿ ನಿತ್ಯ ಅನ್ನದಾಸೋಹ ವ್ಯವಸ್ಥೆಯಿದೆ. ಜಾತ್ರೆಯಲ್ಲಿ 12 ನಾಟಕ ಕಂಪನಿಗಳು ನಾಟಕಪ್ರದರ್ಶನ ನೀಡಲಿದ್ದು, ಅನೇಕ ಸಿನೆಮಾಗಳೂ ಪ್ರದರ್ಶನಗೊಳ್ಳಲಿವೆ.

About the author

ಕನ್ನಡ ಟುಡೆ

Leave a Comment