ರಾಜಕೀಯ

ಬಾದಾಮಿ ಕಾಂಗ್ರಸ್​​​​​ ಶಾಸಕರಲ್ಲಿ ಭಿನ್ನಮತ

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ತಿಳಿಸಿರುವ ಬೆನ್ನಲ್ಲೇ ಕ್ಷೇತ್ರದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮತ್ತು ಟಿಕೆಟ್​ ಘೋಷಿತ ಡಾ. ದೇವರಾಜ ಪಾಟೀಲ ಅವರ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದ್ದು  ಇಬ್ಬರೂ ಪ್ರತ್ಯೇಕವಾಗಿ ತಮ್ಮ ಬೆಂಬಲಿಗರ ಸಭೆ ನಡೆಸಿದ್ದಾರೆ. ಚಿಮ್ಮನಕಟ್ಟಿ ಅವರು ಭಾನುವಾರ ಸಭೆ ನಡೆಸಿದ್ದರು. ಈ ಸಭೆಗೆ ಡಾ. ದೇವರಾಜ ಪಾಟೀಲ ಮತ್ತು ಅವರ ಬೆಂಬಲಿಗರನ್ನು ಕರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ದೇವರಾಜ ಪಾಟೀಲ ಅವರು ಚಿಮ್ಮನಕಟ್ಟಿ ಅವರನ್ನು ಹೊರತುಪಡಿಸಿ ಮತ್ತೆ ಸಭೆ ಕರೆದಿದ್ದಾರೆ.

ಸಿದ್ದರಾಮಯ್ಯ ಅವರು ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದರೂ ಚಿಮ್ಮನಕಟ್ಟಿ ಅವರು ದೇವರಾಜ ಪಾಟೀಲರಿಂದ ಅಂತರ ಕಾಯ್ದು ಕೊಂಡಿದ್ದಾರೆ. ಇದರಿಂದಾಗಿ ದೇವರಾಜ ಪಾಟೀಲರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಮತ್ತೊಂದು ಕಡೆ ಚಿಮ್ಮನಕಟ್ಟಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕೆ ಇಳಿಯಬೇಕು ಎಂದು ಬೆಂಬಲಿಗರು ಒತ್ತಡ ಹಾಕುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನಾಂಕವಾಗಿರುವುದರಿಂದ ಚಿಮ್ಮನಕಟ್ಟಿ ಸ್ಪರ್ಧೆ ವಿಚಾರದ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.

 

About the author

ಕನ್ನಡ ಟುಡೆ

Leave a Comment