ದೇಶ ವಿದೇಶ

ಬಾರ್ಬರಾ ಬುಷ್ ನಿಧನ

ಅಮರಿಕದ ಮಾಜಿ ಪ್ರಥಮ ಮಹಿಳಾ ಪ್ರಜೆ ಮತ್ತು ಸಾಕ್ಷರತಾ ಕಾರ್ಯಕರ್ತೆ ಆಗಿದ್ದ ಬಾರ್ಬರಾ ಬುಷ್ (92) ಇಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತಿ, ಐವರು ಮಕ್ಕಳು, ಹದಿನೇಳು ಮೊಮ್ಮಕ್ಕಳು ಮತ್ತು ಏಳು ಮರಿ ಮಕ್ಕಳು ಇದ್ದಾರೆ. ಬಾರ್ಬರಾ, ಅಮೆರಿಕದ 41 ನೇ ಅಧ್ಯಕ್ಷರಾದ ಜಾರ್ಜ್ ಎಚ್.ಡಬ್ಲೂ ಬುಷ್ ಅವರ ಪತ್ನಿ ಹಾಗೂ 43 ನೇ ಅಧ್ಯಕ್ಷರಾದ ಜಾರ್ಜ್ ಡಬ್ಲೂ. ಬುಷ್ ಅವರ ತಾಯಿ. ಇವರ ಇನ್ನೊಬ್ಬ ಪುತ್ರ  ಜೆಬ್.ಬುಷ್ ಫ್ಲೋರಿಡಾದ ಮಾಜಿ ಗವರ್ನರ್. 1925 ರಲ್ಲಿ ನ್ಯೂಯಾರ್ಕ್‌ನಲ್ಲಿ ಜನಿಸಿದ್ದ ಇವರು, 1945 ಬುಷ್ ಅವರನ್ನು ಮದುವೆಯಾದರು. 1989 ರಿಂದ 1993 ರ ಅವಧಿಯಲ್ಲಿ ಜಾರ್ಜ್ ಬುಷ್ ಅಮೆರಿಕ ಅಧ್ಯಕ್ಷರಾಗಿದ್ದರು.

About the author

ಕನ್ನಡ ಟುಡೆ

Leave a Comment