ಸಿನಿ ಸಮಾಚಾರ

ಬಾಲಿವುಡ್‌ನಲ್ಲಿ ಕನ್ನಡದ ಪ್ರತಿಭೆ

 ಮುಂಬೈ: ಸಿನಿಮಾವೊಂದು ಅಂತರರಾಷ್ಟ್ರೀಯಮಟ್ಟದ ಗುಣಮಟ್ಟ ಕಾಯ್ದುಕೊಳ್ಳಲು ಸೌಂಡ್‌ ಡಿಸೈನಿಂಗ್ ಅತ್ಯಗತ್ಯ. ಹಿಂದಿ, ಮಲಯಾಳಂ, ತಮಿಳು ಚಿತ್ರಗಳಲ್ಲಿ ಇದರ ಬಳಕೆ ಹೆಚ್ಚು. ಚಿತ್ರದಲ್ಲಿನ ದೃಶ್ಯಗಳಂತೆ ಧ್ವನಿಯೂ ಕಥೆ ಹೇಳುತ್ತದೆ. ಅತ್ಯುತ್ತಮವಾಗಿ ಧ್ವನಿವಿನ್ಯಾಸ ನೀಡುವುದರಲ್ಲಿ ವಿಜಯ್‌ಕುಮಾರ್ ಸಿದ್ಧಹಸ್ತರು. ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಅವರು ಕನ್ನಡಿಗ ಎನ್ನುವುದು ಹೆಮ್ಮೆಯ ಸಂಗತಿ.

ಸಿನಿಮಾಗಳಲ್ಲಿ ಕ್ಯಾಮೆರಾದಷ್ಟೇ ಧ್ವನಿ ವಿನ್ಯಾಸಕ್ಕೂ ಸೌಂಡ್‌ ಡಿಸೈನಿಂಗ್ ಪ್ರಾಮುಖ್ಯವಿದೆ. ಕ್ಯಾಮೆರಾ ದೃಶ್ಯ ಕಟ್ಟಿಕೊಡುತ್ತದೆ. ಪ್ರತಿ ದೃಶ್ಯಕ್ಕೂ ನಾವು ಧ್ವನಿ ವಿನ್ಯಾಸ ನೀಡುತ್ತೇವೆ. ಚಿತ್ರವೊಂದು ಅಂತರರಾಷ್ಟ್ರೀಯಮಟ್ಟದ ಗುಣಮಟ್ಟ ಕಾಯ್ದುಕೊಳ್ಳಲು ಇದರ ಅಗತ್ಯವಿದೆ ಎಂದು ಶಬ್ದದ ಮಹತ್ವ ಬಿಚ್ಚಿಟ್ಟರು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡಿಗರಾದ ಸೌಂಡ್‌ ಡಿಸೈನರ್‌ ವಿಜಯ್‌ಕುಮಾರ್.

ಸಿನಿಮಾದಲ್ಲಿ ಮ್ಯೂಸಿಕ್‌ ಹೊರತಾಗಿ ಕೆಲವು ಸೌಂಡ್‌ಗಳಿರುತ್ತವೆ. ಉದಾಹರಣೆಗೆ ಜನನಿಬಿಡ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರು ಹೂವು ತರಕಾರಿ ಖರೀದಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಆಗ ಅಲ್ಲಿನ ಪರಿಸರದಲ್ಲಾಗುವ ಶಬ್ದಗಳು ವಾಹನಗಳ, ಓಡಾಟ ಸಡನ್‌, ಆಗಿ ಹಾಕಿದ ಬ್ರೇಕ್ ಇಂಡಿಕೇಟರ್‌ ಸೌಂಡ್‌ ಜನರ ಗದ್ದಲ, ವ್ಯಾಪಾರಿಗಳ ಕೂಗಾಟ ಮತ್ತು ಆಕೆ ನಡೆಯುವಾಗ ಹೊರಹೊಮ್ಮುವ ಸಪ್ಪಳ ಮುಂತಾದ ಸೂಕ್ಷ್ಮವನ್ನು ಮ್ಯೂಸಿಕ್‌ನ ಗ್ಯಾಪ್‌ ನಡುವೆ ಪ್ರೇಕ್ಷಕರಿಗೆ ಪರಿಣಾಮಕಾರಿ ಕಟ್ಟಿಕೊಡುವುದ “ಸೌಂಡ್‌ ಡಿಸೈನಿಂಗ್”

ವಿಜಯ್‌ಕುಮಾರ್‌ ತಂದೆ ಮಳವಳ್ಳಿ ತಾಲ್ಲೂಕಿನ ಗೌಡಗೆರೆಯವರು. ಉದ್ಯೋಗ ಅರಸಿ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಗೆ ಬಂದರು. ಅಲ್ಲಿನ ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರದಲ್ಲಿ ಕೆಲಸಕ್ಕೆ ಸೇರಿದರು. ಹಾಗಾಗಿ, ವಿಜಯ್‌ಕುಮಾರ್‌ ಗೌಡಗೆರೆ,ಕೊಳ್ಳೇಗಾಲ,ಯಳಂದೂರನಲ್ಲಿ ಪ್ರಾಥಮಿಕದಿಂದ ಪದವಿಪೂರ್ವದವರೆಗೆ ಶಿಕ್ಷಣ ಪೂರೈಸಿದ್ದರು.

ಬಳಿಕ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಬಿ.ಕಾಂ. ಪದವಿ ಪೂರ್ಣಗೊಳಿಸಿದರು. ಇದೇ ವೇಳೆ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಡಿಪ್ಲೊಮ ಶಿಕ್ಷಣ ಕೂಡ ಪಡೆದರು. ಬಳಿಕ ಅವರು ಉದ್ಯೋಗ ಅರಸಿ ಪಯಣ ಬೆಳೆಸಿದ್ದು ಮುಂಬೈಗೆ.ಮುಂಬೈನ ಆರಾಧನಾ ಸ್ಟುಡಿಯೊದಲ್ಲಿ ಆರು ವರ್ಷ ಕೆಲಸ ಮಾಡಿದೆ. ಬಿಡುವಿನ ವೇಳೆ ಅಲ್ಲಿಯೇ ಸೌಂಡ್‌ ಎಡಿಟಿಂಗ್‌ ಕೆಲಸ ಕಲಿತೆ. ನನಗೆ ರಸೂಲ್‌ ಪೂಕುಟ್ಟಿ ಪರಿಚಯವಾದದ್ದು ಅಲ್ಲಿಯೇ ಬಳಿಕ ಅವರ ಕ್ಯಾನರೀಸ್‌ ಪೋಸ್ಟ್‌ ಸೌಂಡಿಂಗ್‌ನಲ್ಲಿ ಅಸೋಸಿಯೇಟ್ ಸೌಂಡ್‌ ಎಡಿಟರ್‌ ಆಗಿ ಸೇರಿದೆ’ ಎಂದು ತಮ್ಮ ವೃತ್ತಿಬದುಕಿನ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ.

‘ಸ್ಲಮ್‌ ಡಾಗ್‌ ಮಿಲೇನಿಯರ್ಸ್‌’ ಚಿತ್ರದ ಶಬ್ದ ಗ್ರಹಣಕ್ಕೆ ರಸೂಲ್ ಪೂಕುಟ್ಟಿ ಆಸ್ಕರ್‌ಗೆ ಭಾಜನರಾದರು. ಈ ಚಿತ್ರದ ಹಿಂದಿ ಅವತರಣಿಕೆಗೆ ಸೌಂಡ್‌ ಎಡಿಟಿಂಗ್‌ ಮಾಡಿದ್ದು ವಿಜಯ್‌ಕುಮಾರ್ ಎಂಬುದು ಹೆಮ್ಮೆಯ ಸಂಗತಿ.ಇಲ್ಲಿಯವರೆಗೆ ಅವರು 150ಕ್ಕೂ ಹೆಚ್ಚು ಚಿತ್ರಗಳಿಗೆ ಸೌಂಡ್‌ ಎಡಿಟಿಂಗ್‌ ಮಾಡಿದ್ದಾರೆ.

 

About the author

ಕನ್ನಡ ಟುಡೆ

Leave a Comment