ಸಿನಿ ಸಮಾಚಾರ

ಬಾಲಿವುಡ್ ಚಿತ್ರಗಳ ಹಿರಿಯ ಪೋಷಕ ನಟಿ ಶಮ್ಮಿ ಇನ್ನಿಲ್ಲ

ಬಾಂಬೆ: ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲಿತ್ತಿದ್ದ ಹಿರಿಯ ಬಾಲಿವುಡ್ ಪೋಷಕ ನಟಿ ಶಮ್ಮಿ ಅವರು ಸೋಮವಾರ ರಾತ್ರಿ ಜುಹೂ ಸರ್ಕಲ್ನ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.ಅವರಿಗೆ 87 ವರ್ಷ ವಯಸ್ಸಾಗಿತ್ತು.

ನರ್ಗಿಸ್ ರಬಾದಿ ಎಂಬ ಜನ್ಮ ನಾಮಾಂಕಿತೆಯಾಗಿದ್ದ ಶಮ್ಮಿ ಅವರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.1949 ರಿಂದ 69 ರ ವರೆಗೆ ಹಲವು ಚಿತ್ರಗಳಲ್ಲಿ ಹಾಸ್ಯಮಯ ಡೈಲಾಗ್ ಗಳ ಮೂಲಕ  ಅವರು ಜನಪ್ರೀಯರಾಗಿದ್ದರು.

ಕೆಲ ಧಾರಾವಾಹಿಗಳನ್ನು ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.ಪಾರಸಿ ಕುಟುಂಬದಲ್ಲಿ ಜನಿಸಿದ್ದ ಶಮ್ಮಿ ಬಾಲಿವುಡ್ ಚಿತ್ರ ನಿರ್ಮಾಪಕ ಸುಲ್ತಾನ್ ಅಹಮದ್ ಅವರನ್ನು ವಿವಾಹವಾಗಿದ್ದರು.

ಶಮ್ಮಿ ನಿಧನಕ್ಕೆ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಸೇರಿದಂತೆ ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ.

About the author

ಕನ್ನಡ ಟುಡೆ

Leave a Comment