ಸಿನಿ ಸಮಾಚಾರ ಸುದ್ದಿ

ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಬಾಡಿಗಾರ್ಡ್‍ಗಳನ್ನ ಕೆಲಸದಿಂದ ಕಿತ್ತು ಹಾಕಲು ಕಾರಣ!!

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಕೆಲವು ಬಾಡಿಗಾರ್ಡ್‍ಗಳನ್ನ ಕೆಲಸದಿಂದ ಕಿತ್ತು ಹಾಕಿದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ನಟ ಸಲ್ಮಾನ್ ಎಲ್ಲಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದ ಕಾರಣ ಅವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಲಾಗಿತ್ತು. ಆದ್ರೆ ಇದರ ಹಿಂದಿನ ನಿಜವಾದ ಕಾರಣ ಈಗ ಬಯಲಾಗಿದೆ.

ಕೆಲಸದಿಂದ ತೆಗೆಯಲಾದ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ಪತ್ರಿಕೆಯೊಂದಿಗೆ ಮಾತನಾಡಿ ಸತ್ಯಾಂಶವನ್ನ ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಖಾನ್ ತುಂಬಾ ಮೂಡಿ. ಇತ್ತೀಚೆಗೆ ಅವರು ಕೋಪದಲ್ಲಿ ಒಬ್ಬರಲ್ಲ, 20 ಗಾರ್ಡ್‍ಗಳನ್ನು ಕಾರಣವಿಲ್ಲದೆ ಕೆಲಸದಿಂದ ತೆಗೆದರು ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ವೇಳೆ, ಸಲ್ಮಾನ್ ಖಾನ್ ಅವರ ಮುಂಬೈ ಅತಿಥಿಗಳ ಭದ್ರತೆಗೆ ಹಲವು ಗಾರ್ಡ್‍ಗಳನ್ನ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬ ಅತಿಥಿ ತನಗೆ ಸರಿಯಾಗಿ ಸ್ವಾಗತ ಮಾಡಲಿಲ್ಲ ಎಂದು ಗಾರ್ಡ್‍ವೊಬ್ಬನ ಜೊತೆ ವಾದಕ್ಕಿಳಿದರು. ಈ ವೇಳೆ ಗಾರ್ಡ್, ನಾನು ಸೆಕ್ಯೂರಿಟಿ ಗಾರ್ಡ್ ಆಗಿ ನನ್ನ ಕರ್ತವ್ಯವನ್ನ ಸರಿಯಾಗಿ ಮಾಡಿದ್ದೇನೆ ಎಂದಾಗ ಆ ಅತಿಥಿ ಕೋಪಗೊಂಡು ಕೆನ್ನೆಗೆ ಬಾರಿಸಿದ್ರು. ಗಾರ್ಡ್ ಕೂಡ ತಿರುಗಿಸಿ ಅವರ ಕೆನ್ನೆಗೆ ಬಾರಿಸಿದ ಎಂದು ಹೇಳಿದ್ದಾರೆ

 ಈ ಘಟನೆಯ ಮರುದಿನ ನಿರೀಕ್ಷೆಯಂತೆ ಸಲ್ಮಾನ್ ಖಾನ್ ಎಲ್ಲಾ ಬಾಡಿಗಾರ್ಡ್‍ಗಳನ್ನ ಕರೆಸಿದ್ರು. ಒಂದೇ ಬಾರಿಗೆ ಎಲ್ಲಾ 20 ಬಾಡಿಗಾರ್ಡ್‍ಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದ್ರು ಎಂದಿದ್ದಾರೆ.

ಕೆಲಸದಿಂದ ತೆಗೆಯಲ್ಪಟ್ಟ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, ಹೌದು, ಇದು ನಿಜ. ತಪ್ಪು ಮಾಡಿದ ಗಾರ್ಡ್‍ನನ್ನು ಬೇಕಾದ್ರೆ ತೆಗೆಯಲಿ. ಆದ್ರೆ ಅವನಿಂದ ಬೇರೆ ಎಲ್ಲರೂ ಯಾಕೆ ಕೆಲಸ ಕಳೆದುಕೊಳ್ಬೇಕು ಎಂದು ನಮ್ಮಲ್ಲಿ ಒಬ್ಬರು ಭಾಯ್‍ಗೆ ಹೇಳುವ ಧೈರ್ಯ ತೋರಿದ್ದಕ್ಕೆ ಅವರು “ನೀನು ಜಾಸ್ತಿ ಮಾತಾಡ್ತಿದ್ದೀಯಾ” ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment