ಸಿನಿ ಸಮಾಚಾರ

ಬಾಲಿವುಡ್ ಲೆಜೆಂಡ್ ನಟ ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್ ವಿಧಿವಶ

ಮುಂಬೈ: ಬಾಲಿವುಡ್ ಖ್ಯಾತ ಲೆಜೆಂಡ್ ನಟ ರಾಜ್ ಕಪೂರ್ ಅವರ ಪತ್ನಿ ಕೃಷ್ಣಾ ರಾಜ್ ಕಪೂರ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಮುಂಬೈ ನಿವಾಸದಲ್ಲಿ ಕೃಷ್ಣಾ ರಾಜ್ ಕಪೂರ್ ಅವರು ಹೃದಯಾಘಾತಕ್ಕೆ ಒಳಗಾಗಿ ಇಂದು ಮೃತಪಟ್ಟಿದ್ದಾರೆ. ಕಳೆದ ಹಲವು ದಿನಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕೃಷ್ಣಾ ರಾಜ್ ಕಪೂರ್ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಕೃಷ್ಣಾರಾಜ್ ಕಪೂರ್ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದ್ದು, ಇಂದು ಚೆಂಬೂರ್ ಶವಾಗಾರದಲ್ಲಿ ಅವರ ಅಂತಿಮ ವಿಧಿವಿಧಾನ ನಡೆಯಲಿದೆ ಅವರ ಪುತ್ರ ರಂಧೀರ್ ಕಪೂರ್ ಅವರು ಹೇಳಿದ್ದಾರೆ. ಕೃಷ್ಣಾರವರು 1946, ಮೇ ತಿಂಗಳಿನಲ್ಲಿ ರಾಜ್‌ಕಪೂರ್‌ ಅವರನ್ನು ವರಿಸಿದರು. ಕೃಷ್ಣಾರವರು ಪುತ್ರರಾದ ರಂಧೀರ್ ಕಪೂರ್‌, ರಿಷಿ ಕಪೂರ್, ರಾಜೀವ್‌ ಕಪೂರ್‌, ಪುತ್ರಿಯರಾದ ರಿತೂ ನಂದಾ, ರಿಮಾ ಕಪೂರ್‌ ಅವರನ್ನು ಅಗಲಿದ್ದಾರೆ.

About the author

ಕನ್ನಡ ಟುಡೆ

Leave a Comment