ರಾಜ್ಯ ಸುದ್ದಿ

ಬಿಎಸ್​ವೈ ಶೀಘ್ರ ಸರ್ಕಾರ ರಚಿಸಲಿದ್ದಾರೆ ರಮೇಶ್​ ಜಾರಕಿಹೊಳಿ ಬೆಂಬಲ ಭರವಸೆ ಇದೆ: ಕೋಟಾ ಶ್ರೀನಿವಾಸ ಪೂಜಾರಿ

ಬೆಳಗಾವಿ: ಬಿ.ಎಸ್.ಯಡಿಯೂರಪ್ಪ ಶೀಘ್ರದಲ್ಲೇ ಸರ್ಕಾರ ರಚಿಸಲಿದ್ದಾರೆ. ಮೈತ್ರಿ ಸರ್ಕಾರದಿಂದ ರಮೇಶ್ ಜಾರಕಿಹೊಳಿ ಮಾನಸಿಕವಾಗಿ ದೂರವಾಗಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಯಾರೇ ಬಿಜೆಪಿಗೆ ಬಂದರೂ ಸ್ವೀಕರಿಸಿ ಸರ್ಕಾರ ರಚನೆ ಮಾಡುತ್ತೇವೆ. ರಮೇಶ್ ಜಾರಕಿಹೊಳಿಗೆ ಬಿಜೆಪಿಗೆ ಬರಬೇಕು ಎಂಬ ಆಸೆ ಇದೆ. ಅವರು ನಮಗೆ ಬೆಂಬಲ ಕೊಡುವ ಭರವಸೆಯಿದೆ. 10ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ ಬಂದರೆ ಸ್ವಾಗತ. ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನರ ಭಾವನೆ ಎಂದಿದ್ದಾರೆ. ಕುಂದಾನಗರಿಗೆ ಸಕ್ಕರೆ ನಾಡಿನ ನಾಯಕ ಬಂದಿದ್ದೇ ಅಪರಾಧ. ಈ ಬಗ್ಗೆ ತಮಗೆ ನೋವಾಗಿರುವುದರ ಬಗ್ಗೆ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ. ಸಚಿವ ರಮೇಶ ಜಾರಕಿಹೊಳಿ‌ ಈಗಾಗಲೇ ಸರ್ಕಾರದಿಂದ ಮಾನಸಿಕವಾಗಿ ದೂರವಾಗಿದ್ದಾರೆ ಎಂದು ಹೇಳಿದ್ದಾರೆ. 

About the author

ಕನ್ನಡ ಟುಡೆ

Leave a Comment