ಸಿನಿ ಸಮಾಚಾರ

ಬಿಗ್​ಬಾಸ್​ ಖ್ಯಾತಿಯ ಅಯ್ಯಪ್ಪ ಮದುವೆ ಡೇಟ್​ ಫಿಕ್ಸ್​

ಬೆಂಗಳೂರು: ರಾಜ್ಯದ ರಣಜಿ ತಂಡದ ಮಾಜಿ ಆಟಗಾರ ಹಾಗೂ ಬಿಗ್ ಬಾಸ್​ ಮೂರನೇ ಸೀಸನ್​ ಸ್ಪರ್ಧಿಯಾಗಿ ಪ್ರಸಿದ್ಧಿ ಪಡೆದಿರುವ ಎನ್​.ಸಿ ಅಯ್ಯಪ್ಪ ಮತ್ತು ಸ್ಯಾಂಡಲ್ ವುಡ್ ನಟಿ ಅನು ಪೂವಮ್ಮ ಅವರ ಮ್ಯಾರೇಜ್​ ಡೇಟ್​ ಫಿಕ್ಸ್​ ಆಗಿದೆ.

ಜನವರಿಗೆ 19 ಮತ್ತು 20ರಂದು ಮದುವೆ, ಆರತಕ್ಷತೆ ನಡೆಯಲಿದ್ದು, ವಿರಾಜಪೇಟೆಯ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. 2018ರ ಮೇ ತಿಂಗಳಿನಲ್ಲಿ ಇವರಿಬ್ಬರ ನಿಶ್ಚಿತಾರ್ಥವಾಗಿತ್ತು.

ಕರ್ವಾ, ಪಾನಿಪೂರಿ ಮುಂತಾದ ಸಿನಿಮಾದಲ್ಲಿ ನಟಿಸಿರುವ ಅನು ಮತ್ತು ಅಯ್ಯಪ್ಪ ಈಗಾಗಲೇ ಮದುವೆ ತಯಾರಿಯಲ್ಲಿ ತೊಡಗಿದ್ದಾರೆ.

About the author

ಕನ್ನಡ ಟುಡೆ

Leave a Comment