ಸುದ್ದಿ

ಬಿಗ್ ಬಾಸ್  ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ.

ಬೆಂಗಳೂರು: ಬಾರ್ ನೌಕರನ ಅಪಹರಣ ಪ್ರಾಣ ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಸುನಾಮಿ ಕಿಟ್ಟಿ ಅಲಿಯಾಸ್ ಪ್ರದೀಪನನ್ನು ಜ್ಞಾನ ಭಾರತಿ ಠಾಣೆ ಪೊಲೀಸ್ರು ಬಂಧಿಸಿದ್ದಾರೆ.

ರೆಸ್ಟೋರೆಂಟ್ ಒಂದರಲ್ಲಿ ಬಾರ್ ನೌಕರನೊಬ್ಬರಿಗೆ ಗನ್ ತೋರಿಸಿ ಬೆದರಿಕೆ ಒಡ್ಡಿದ ಪ್ರಕರಣ ದಾಖಲಾಗಿತ್ತು.

ಗಿರೀಶ್ ಎಂಬುವವರನ್ನು ಕಿಟ್ಟಿ ಮತ್ತು ಅವರ ತಂಡ  ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಸಂಬಂಧ ಪೊಲೀಸ್ ಸುನಾಮಿ ಕಿಟ್ಟಿ ಸೇರಿದಂತೆ ಅರ್ಜುನ್ ಮತ್ತು ಯೋಗೇದ್ರ ಎಂಬುವವರನ್ನು ಬಂಧಿಸಿದ್ದಾರೆ.ಈ ಪ್ರಕರಣದ ಇನ್ನೊಬ್ಬ ಆರೋಪಿ ಗಿರೀಶ್ ಎಂಬುವವರು ತಲೆಮರೆಸಿಕೊಂಡದ್ದು, ಅವರ ಪತ್ತೆಗಾಗಿ ಜ್ಞಾನಭಾರತಿ ಪೊಲೀಸ್ ಠಾಣೆ ಹುಡುಕಾಟ ನಡೆಸಿದ್ದಾರೆ.

About the author

ಕನ್ನಡ ಟುಡೆ

Leave a Comment