ರಾಷ್ಟ್ರ ಸುದ್ದಿ

ಬಿಜೆಡಿ ಮಹಾಘಟಬಂಧನ್ ಗೆ ಸೇರುವ ಪ್ರಶ್ನೆಯೇ ಇಲ್ಲ: ಒಡಿಶಾ ಸಿಎಂ ನವೀನ್ ಪಟ್ನಾಯಕ್

ಭುವನೇಶ್ವರ್: ಬಿಜು ಜನತಾ ದಳ (ಬಿಜೆಡಿ) ಮುಬರುವ ಲೋಕಸಭಾ ಚುನಾವಣೆಗೆ ಮುನ್ನ ರಚನೆಯಾಗಲಿದೆ ಎನ್ನಲಾದ ಮಹಾಘಟಬಂಧನ್(ಬಿಜೆಪಿ ವಿರೋಧಿ ಪಕ್ಷಗಳ ಮಹಾಮೈತ್ರಿ)ಯ ಭಾಗವಾಗಿರುವುದಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬುಧವಾರ ಹೇಳಿದ್ದಾರೆ.
ತಮ್ಮ ಪಕ್ಷವು ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಂಡ ಸಮಾನ ಅಂತರ ಕಾಯ್ದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.”ನಾವು ಮಹಾಘಟಬಂಧನ್ ನ ಭಾಗವಾಗುವುದಿಲ್ಲ, ನಮ್ಮ ಮೂಲ ತತ್ವಕ್ಕೆ ನಾವು ಬದ್ದವಾಗಿದ್ದು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳಲಿದ್ದೇವೆ” ಎಂದು ಪಟ್ನಾಯಕ್ ಭುವನೇಶ್ವರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಮುನ್ನ ಮಂಗಳವಾರ ಮಾದ್ಯಮದೆದುರು ಮಾತನಾಡಿದ್ದ ಪಟ್ನಾಯಕ್ ಲೋಕಸಭೆ ಚುನಾವಣೆಗೆ ಮುನ್ನ ಮಹಾಘಟಬಂಧನ್ ಗೆ ಸೇರ್ಪಡೆಯಾಗುವ ಕುರಿತು ನಿರ್ಧರಿಸಲು ನಮಗೆ ಇನ್ನೂ ಸಾಕಷ್ಟು ಸಮಯ ಬೇಕು ಎಂದಿದ್ದರು.

About the author

ಕನ್ನಡ ಟುಡೆ

Leave a Comment