ರಾಜ್ಯ ಸುದ್ದಿ

ಬಿಜೆಪಿಯವರಿಗೆ ಕೆಲಸವಿಲ್ಲ, 24 ಗಂಟೆಯಲ್ಲಿ ಸರಕಾರ ಬಿದ್ದು ಹೋಗುತ್ತೆ ಎಂಬುದು ಶುದ್ಧ ಸುಳ್ಳ: ಸಿದ್ದರಾಮಯ್ಯ

ಹುಬ್ಬಳ್ಳಿ: 24 ಗಂಟೆಯಲ್ಲಿ ಸರಕಾರ ಬಿದ್ದು ಹೋಗುತ್ತೆ ಎಂಬುದು ಶುದ್ಧ ಸುಳ್ಳ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಅದರಲ್ಲೂ ಉಮೇಶ್ ಕತ್ತಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ಸುಭದ್ರವಾಗಿದ್ದು, ಪೂರ್ಣ ಅಧಿಕಾರಾವಧಿ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯವರು ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನಿಸಿದ್ದಾರೆ. ಆದರೆ, ಅದು ಫಲ ನೀಡದು ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಮೂಲತಃ ಕಾಂಗ್ರೆಸ್ ವ್ಯಕ್ತಿಯಾಗಿದ್ದು, ಪಕ್ಷದಲ್ಲಿಯೇ ಇರುತ್ತಾರೆ. ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಸಹಜವಾಗಿ ಬೇಸರಗೊಂಡಿದ್ದಾರೆ. ಮುಂದೆ ಇದೆಲ್ಲ ಸರಿ ಹೋಗುತ್ತದೆ ಎಂದರು. ಬಿಜೆಪಿಯವರು ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನಿಸಿದ್ದಾರೆ. ಆದರೆ, ಅದು ಫಲ ನೀಡದು ಎಂದು ಹೇಳಿದರು. ರಮೇಶ್ ಜಾರಕಿಹೊಳಿ ಮೂಲತಃ ಕಾಂಗ್ರೆಸ್ ವ್ಯಕ್ತಿಯಾಗಿದ್ದು, ಪಕ್ಷದಲ್ಲಿಯೇ ಇರುತ್ತಾರೆ. ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಸಹಜವಾಗಿ ಬೇಸರಗೊಂಡಿದ್ದಾರೆ. ಮುಂದೆ ಇದೆಲ್ಲ ಸರಿ ಹೋಗುತ್ತದೆ ಎಂದರು.

About the author

ಕನ್ನಡ ಟುಡೆ

Leave a Comment