ರಾಷ್ಟ್ರ ಸುದ್ದಿ

ಬಿಜೆಪಿಯ ಅಧಿಕೃತ ವೆಬ್‌ಸೈಟ್‌ ಹ್ಯಾಕ್‌

ಹೊಸದಿಲ್ಲಿ: ಬಿಜೆಪಿಯ ಅಧಿಕೃತ ವೆಬ್‌ಸೈಟ್‌ಗೆ ಮಂಗಳವಾರ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ. ಪಕ್ಷದ ವೆಬ್‌ಸೈಟ್‌ ಹ್ಯಾಕ್‌ ಆಗಿದ್ದು, ಎರರ್‌ 522 ಎಂಬ ಸಂದೇಶ ಕಾಣಿಸುತ್ತದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. www.bjp.org ವೆಬ್‌ಸೈಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಶ್ಲೀಲ ಹಾಗೂ ನಿಂದನಾತ್ಮಕ ಸಂದೇಶಗಳು ಕಾಣಿಸುತ್ತಿವೆ ಎಂದು ಮತ್ತೆ ಕೆಲವು ವರದಿಗಳು ಹೇಳಿವೆ.

ಬಿಜೆಪಿ ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ಇರುವ ಹಿನ್ನೆಲೆಯಲ್ಲಿ ಬಿಜೆಪಿ ವೆಬ್‌ಸೈಟ್‌ ಹ್ಯಾಕ್‌ ಆಗಿದೆ ಎಂಬ ವರದಿಗಳಿಗೆ ಹೆಚ್ಚಿನ ಮಹತ್ವ ಬಂದಿದೆ. ಇತ್ತೀಚೆಗೆ ಭಾರತ ಸರಕಾರದ ಹಲವು ವೆಬ್‌ಸೈಟ್‌ಗಳಿಗೆ ಪಾಕ್‌ ಮೂಲದ ಹ್ಯಾಕರ್‌ಗಳು ಕನ್ನ ಹಾಕಿದ್ದರು. ಅಮರ್‌ ಉಜಾಲ ಹಿಂದಿ ನ್ಯೂಸ್‌ ವೆಬ್‌ಸೈಟ್‌ ಪ್ರಕಾರ, ಹ್ಯಾಕ್‌ ಆಗಿರುವ ಬಿಜೆಪಿ ವೆಬ್‌ಸೈಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್‌ ಚಾನ್ಸೆಲರ್‌ ಏಂಜೆಲಾ ಮೆರ್ಕೆಲ್‌ ಅಸಂಸದೀಯ ಭಾಷೆಯಲ್ಲಿ ಮಾತನಾಡಿರುವುದಾಗಿ ಹೇಳಲಾಗಿದೆ. ಅಮರ್‌ ಉಜಾಲ 11:30ಕ್ಕೆ ಈ ವರದಿ ಪ್ರಕಟಿಸಿದ್ದು, ಆ ಬಳಿಕ ಬಿಜೆಪಿ ವೆಬ್‌ಸೈಟ್‌ ಎರರ್‌ 522 ತೋರಿಸುತ್ತಿದೆ ಎಂದು ವರದಿ ಹೇಳಿದೆ.

 

 

About the author

ಕನ್ನಡ ಟುಡೆ

Leave a Comment