ರಾಜಕೀಯ

ಬಿಜೆಪಿ ಅಧಿಕಾರಕ್ಕೆ ಬಂದರೇ ಹೈದರಬಾದ್ ಹೆಸರು ಭಾಗ್ಯನಗರವಾಗಿ ಬದಲು: ಯೋಗಿ ಆದಿತ್ಯ ನಾಥ್

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಾಗರವನ್ನಾಗಿ ಬದಲಾಯಿಸುವುದಾಗಿ  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕಳೆದ ತಿಂಗಳು ಘೋಷ ಮಹಲ್ ಬಿಜೆಪಿ ಶಾಸಕ ರಾಜಾಸಿಂಗ್ ಕೂಡ ಇದೇ  ರೀತಿಯ ಹೇಳಿಕೆ ನೀಡಿದ್ದರು. ಈ ಮೊದಲು ಹೈದರಾಬಾದ್ ಭಾಗ್ಯನಗರ ಎಂದರೇ ಇತ್ತು, ಆದರೆ 1950 ರಲ್ಲಿ ಭಾರತದ ಮೇಲೆ ದಾಳಿ ಮಾಡಿದ ಕ್ವಿಲ್ ಕುತುಬ್ ಶಾ, ಭಾಗ್ಯನಗರವನ್ನು ಹೈದರಾಬಾದ್ ಎಂಬುದಾಗಿ ಬದಲಾಯಿಸಿದ.
ಅದೇ ವೇಳೆ ಹಲವು ಹಿಂದುಗಳ ಮೇಲೇ ದಾಳಿ ಕೂಡ ನಡೆಸಿದ್ದ, ಹಲವು ದೇವಾಲಯಗಳನ್ನು ನಾಶ ಪಡಿಸಿದ್ದ. ಹೀಗಾಗಿ ಹೈದರಾಬಾದ್ ಹೆಸರನ್ನು ಮತ್ತೆ ಭಾಗ್ಯ ನಗರವಾಗಿ ಬದಲಾಯಿಸುವುದಾಗಿ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment