ರಾಜ್ಯ ಸುದ್ದಿ

ಬಿಜೆಪಿ ಆಮಿಷದ ಆಡಿಯೊ ಕ್ಲಿಪ್‌; ಬಿಎಸ್‌ವೈ, ಶ್ರೀರಾಮುಲು, ರೆಡ್ಡಿ ವಿರುದ್ಧ ದೂರು ದಾಖಲು

ಬೆಂಗಳೂರು: ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸಿರುವ ಆಡಿಯೊ ಕುರಿತು ತನಿಖೆ ನಡೆಸುವಂತೆ ಕಾಂಗ್ರೆಸ್‌ ಪಕ್ಷ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದೆ.

ಹಣ ಹಾಗೂ ಅಧಿಕಾರದ ಅಮಿಷ ಒಡ್ಡಿ ಕಾಂಗ್ರೆಸ್‌ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಮುಖಂಡರು ನಡೆಸಿದ್ದಾರೆಂದು ಆಯುಕ್ತರಿಗೆ ನೀಡಿದ ದೂರಿನಲ್ಲಿ ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ತಿಳಿಸಿದ್ದಾರೆ. ”10 ಕಾಂಗ್ರೆಸ್‌ ಶಾಸಕರಿಗೆ ತಲಾ 25 ಕೋಟಿ ರೂ., ಸಚಿವ ಸ್ಥಾನ ಹಾಗೂ ಉಪಚುನಾವಣೆ ಖರ್ಚು ನಾವೇ ನೋಡಿಕೊಳ್ಳುತ್ತೇವೆ. ರಾಜೀನಾಮೆ ಕೊಟ್ಟು ನಮ್ಮೊಂದಿಗೆ ಸೇರಿ ಎಂದು ಶಾಸಕ ಶ್ರೀರಾಮುಲು ಆಪ್ತ ಸಹಾಯಕ ಮತ್ತು ದುಬೈ ಮೂಲದ ಅವರ ಸ್ನೇಹಿತ ಅಮಿಷ ಒಡ್ಡಿದ್ದಾರೆ” ಎಂಬುದು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದನ್ನೆ ಕಾಂಗ್ರೆಸ್‌ ಪಕ್ಷ ಆಧಾರವಾಗಿಟ್ಟುಕೊಂಡು ದೂರು ಸಲ್ಲಿಸಿದೆ.

ಅಧಿಕಾರ ಹಿಡಿಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ, ಮುಖಂಡರಾದ ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿದಂತೆ ಇನ್ನಿತರರ ಹೆಸರನ್ನು ನಮೂದಿಸಲಾಗಿದೆ. ಆಡಿಯೊದಲ್ಲಿ ನಡೆಸಿದ ಸಂಭಾಷಣೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ಈ ಕೃತ್ಯದಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

About the author

ಕನ್ನಡ ಟುಡೆ

Leave a Comment