ರಾಷ್ಟ್ರ ಸುದ್ದಿ

ಬಿಜೆಪಿ ನಕಾರಾತ್ಮಕ ರಾಜಕೀಯದಿಂದ ಕಾಂಗ್ರೆಸ್’ಗೆ ಗೆಲುವು: ಸೋನಿಯಾ ಗಾಂಧಿ

ನವದೆಹಲಿ: ಬಿಜೆಪಿ ನಾಯಕರ ನಕಾರಾತ್ಮಕ ರಾಜಕೀಯದಿಂದಾಗಿ ಕಾಂಗ್ರೆಸ್ ಗೆಲವು ಸಾಧಿಸುವಂತಾಯಿತು ಎಂದು ಕಾಂಗ್ರೆಸ್ ಮತ್ತು ಯುಪಿಎ ಮೈತ್ರಿ ಕೂಟದ ಅಧಿನಾಯಕಿ ಸೋನಿಯಾ ಗಾಂಧಿ ಬುಧವಾರ ಹೇಳಿದ್ದಾರೆ.

ರಾಜಸ್ಥಾನ, ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಸೋಲು ಕಂಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸೋನಿಯಾ ಗಾಂಧಿಯವರು, ಕಾಂಗ್ರೆಸ್ ಗೆಲುವಿಗೆ ಸಂಸತ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರ ನಕಾರಾತ್ಮಕ ರಾಜಕೀಯದಿಂದಾಗಿ ಕಾಂಗ್ರೆಸ್’ಗೆ ಗೆಲುವು ಸಿಕ್ಕಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷದ ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಉಪಾಂತ್ಯ ಕದನ ಎಂದೇ ಭಾವಿಸಲಾಗಿದ್ದ ರಾಜಸ್ಥನಾ, ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣ ಹಾಗೂ ಮಿಜೋರಂ ರಾಜ್ಯಗಳ ಚುನಾವಣಾ ಫಲಿತಾಂಶ ನಿನ್ನೆಯಷ್ಟೇ ಹಲವು ಅಚ್ಚರಿಗಳೊಂದಿಗೆ ಪ್ರಕಟಗೊಂಡಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೋಡಿಗೆ ಅಗ್ನಿ ಪರೀಕ್ಷೆ ಎನಿಸಿಕೊಂಡಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ರಾಜ್ಯಗಳಲ್ಲು ಸೋಲುವ ಮೂಲಕ ಶೂನ್ಯ ಸಂಪಾದನೆ ಮಾಡಿ ತೀವ್ರ ಮುಖಭಂಗ ಅನುಭವಿಸಿದೆ. ತನ್ನ ಕೈಯಲ್ಲಿದ್ದ ಮೂರು ರಾಜ್ಯಗಳನ್ನು ಬಹುತೇಕ ಕಾಂಗ್ರೆಸ್ ಕೈಗೆ ಬಿಟ್ಟುಕೊಟ್ಟಿದ್ದು, ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜಕೀಯ ಪುನಶ್ಚೇತನಕ್ಕೆ ನೀರೆರೆದಿದೆ.

About the author

ಕನ್ನಡ ಟುಡೆ

Leave a Comment