ರಾಜಕೀಯ

ಬಿಜೆಪಿ ಪ್ರಯತ್ನಕ್ಕೆ ಜೆಡಿಎಸ್ ಮಾಸ್ಟರ್ ಪ್ಲಾನ್: ಒಕ್ಕಲಿಗ ಶಾಸಕರೇ ಮೈನ್ ಟಾರ್ಗೆಟ್

ಮೈಸೂರು: ಸರ್ಕಾರ ಉರುಳಿಸುವ ಬಿಜೆಪಿ ಪ್ರಯತ್ನಕ್ಕೆ ಮಾಸ್ಟರ್ ಸ್ಚ್ರೋಕ್ ನೀಡಲು ಜೆಡಿಎಸ್ ಕೂಡ ಸಿದ್ಧತೆ ನಡೆಸುತ್ತಿದೆ, ಹೀಗಾಗಿ ಬಿಜೆಪಿ ಶಾಸಕರ ಜೊತೆ ಸಂಪರ್ಕದಲ್ಲಿರುವುದಾಗಿ ಜೆಡಿಎಸ್ ತಿಳಿಸಿದೆ, ಬಿಜೆಪಿ ಶಾಸಕರ ಜೊತೆ ಸಂಪರ್ಕದಲ್ಲಿರುವುದಾಗಿ ಜೆಡಿಎಸ್ ಹೇಳಿರುವುದು ಕೇಸರಿ ಪಕ್ಷಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ, ಸರ್ಕಾರವನ್ನು ರಕ್ಷಿಸುವುದು ಹಾಗೂ ಬಿಜೆಪಿ ಶಾಸಕರನ್ನು ಸೆಳೆಯುವ ಯತ್ನ ನಡೆಸುತ್ತಿರುವುದಾಗಿ ಸಣ್ಣ ನೀರಾವರಿ ಸಚಿವ ಸಿ,ಎಸ್ ಪುಟ್ಟರಾಜು ಮತ್ತಿತರ ಜೆಡಿಎಸ್ ನಾಯಕರು ಹೇಳಿದ್ದಾರೆ.
ಬಿಜೆಪಿಯಲ್ಲಿರುವ ಒಕ್ಕಲಿಗ ಶಾಸಕರನ್ನು ತನ್ನತ್ತ ಸೆಳೆಯಲು ಜೆಡಿಎಸ್ ಪ್ರಯತ್ನಿಸುತ್ತಿದೆ, ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಸೆಳೆಯುವುದು, ಸ್ವಲ್ಪ ಕಷ್ಟದ ಕೆಲಸವಾಗಿದೆ, ಹೀಗಿದ್ದರೂ ಬಿಜೆಪಿ ಶಾಸಕರನ್ನು ಸೆಳೆಯಲು ಮುಂದಾಗಿದೆ. ಇನ್ನೂ ಸಿದ್ದರಾಮಯ್ಯ ಕೂಡ ತಾವು ಬಿಜೆಪಿ ಶಾಸಕರ ಜೊತೆ ಸಂಪರ್ಕದಲ್ಲಿರುವುದಾಗಿ ಬಾಂಬ್ ಸಿಡಿಸಿದ್ದಾರೆ, ಜೆಡಿಎಸ್ ಶಾಸಕರನ್ನು ಸೋಲಿಸಲು ಚುನಾವಣೆಯಲ್ಲಿ ನಾನು ಕಷ್ಟ ಪಟ್ಟಿದ್ದೇನೆ, ಹೀಗಿರುವಾಗ ನಾನು ಏಕೆ ಜೆಡಿಎಸ್ ಸೇರಲಿ ಎಂದು ಮೈಸೂರು ಭಾಗದ ಒಕ್ಕಲಿಗ ಶಾಸಕರೊಬ್ಬರು ಹೇಳಿದ್ದಾರೆ.
ಇನ್ನೂ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ, ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ  ಬಿಜೆಪಿ ಸರ್ಕಾರ ಉರುಳಿಸುವ ತಂತ್ರ ನಡೆಸುತ್ತಿದೆ ಎಂದು ಸಚಿವ ಎಚ್.ಡಿ ರೇವಣ್ಣ ಕಿಡಿಕಾರಿದ್ದಾರೆ,

About the author

ಕನ್ನಡ ಟುಡೆ

Leave a Comment