ರಾಜಕೀಯ

ಬಿಜೆಪಿ ಪ್ರಯತ್ನ ಎಂದಿಗೂ ಫಲಿಸದು, ಆಪರೇಷನ್ ಕಮಲ ವಿಫಲ ಯತ್ನ: ಮಾಜಿ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ,ಎಸ್ ಯಡಿಯೂರಪ್ಪ ಅವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ, ತಿಪ್ಪರಲಾಗ ಹಾಕಿದಲೂ ಅವರ ಪ್ರಯತ್ನ ಈಡೇರದು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲಾ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಬಿಜೆಪಿಗೆ ಯಾವ ಶಾಸಕರು ಹೋಗುವುದಿಲ್ಲ ಎಂದು ಗೊತ್ತಿದ್ದರೂ ಅವರೆಲ್ಲಾ ವಿಫಲ ಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆಪರೇಷನ್ ಕಮಲ ಎಂಬ ರೋಗವನ್ನು ತಂದಿಟ್ಟವರು ಬಿಜೆಪಿಯವರು, ಯಾರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೋ ಅವರು ಇಂಥಹ ಕೆಲಸಗಳಿಗೆ ಕೈ ಹಾಕುತ್ತಾರೆ.
ಇನ್ನೂ ಈಗ ಇರುವ ಯಾವುದೇ ಹಾಲಿ ಸಚಿವರು ತಮ್ಮ ಹುದ್ದೆಯಿಂದ ಕೆಳಗಿಳಿಯುವುದಿಲ್ಲ ಹಾಗೂ ಯಾವುದೇ ಶಾಸಕರಿಗೂ ಯಾವುದೇ ಹುದ್ದೆಯ ಭರವಸೆ ಕೂಡ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಸಿದ್ದರಾಮಯ್ಯ ಜನವರಿ 18 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಎಲ್ಲಾ ಶಾಸಕರು ಹಾಜರಾಗಲಿದ್ದಾರೆ ಎಂಬ ಸ್ಪಷ್ಟಪಡಿಸಿದ್ದಾರೆ..

About the author

ಕನ್ನಡ ಟುಡೆ

Leave a Comment