ರಾಷ್ಟ್ರ ಸುದ್ದಿ

ಬಿಜೆಪಿ ರಾಮಮಂದಿರ ಕುರಿತು ಸುಗ್ರೀವಾಜ್ಞೆ ಹೊರಡಿಸಲಿ: ಓವೈಸಿ ಅಸಾದುದ್ದೀನ್ ಸವಾಲು

ಹೈದರಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆ ಕುರಿತು ಭಾರತೀಯ ಜನತಾ ಪಕ್ಷ, ಸುಗ್ರೀವಾಜ್ಞೆ ಹೊರಡಿಸಲಿ ಎಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ  ಅಸಾದುದ್ದೀನ್ ಓವೈಸಿ ಸವಾಲೆಸೆದಿದ್ದಾರೆ.
“ರಾಮಮಂದಿರದ ಕುರಿತು ಸುಗ್ರೀವಾಜ್ಞೆ ತರಲು ಬಿಜೆಪಿ ಏಕೆ ಹಿಂದೇಟು ಹಾಕುತ್ತಿದೆ? ಅವರು ಸುಗ್ರೀವಾಜ್ಞೆ  ತರಲಿ, ಅವರು ಪ್ರತಿ ಬಾರಿ ಇದನ್ನೇ ಹೇಳುತ್ತಾ ಬಂದಿದ್ದಾರೆ. ಹಾಗೆ ಅವರು ಬೆದರಿಕೆಯೊಡ್ಡುತ್ತಾ ಬಂದಿದ್ದಾರೆ.ಬಿಜೆಪಿ, ಆರ್.ಎಸ್.ಎಸ್., ವಿಎಚ್ಪಿ ಗಳವರು ಪ್ರತಿ ಬಾರಿ ಇದನ್ನೇ ಪುನರಾವರ್ತಿಸುತ್ತಾರೆ.ಈಗ ಅವರು ಹಾಗೆ ಮಾಡಿ ತೋರಿಸಲಿ, ಹಾಗೆಂದು ನಾನು ಅವರಿಗೆ ಸವಾಲು ಎಸೆಯುತ್ತೇನೆ.” ಓವೈಸಿ ಹೇಳಿದ್ದಾರೆ. ಇಂದು ಸುಪ್ರೀಂ ಕೋರ್ಟ್ಅಯೋಧ್ಯೆ ವಿವಾದ ಕುರಿತ ವಿಚಾರಣೆಯನ್ನು ಜನವರಿ 2019 ರವರೆಗೆ ಮುಂದೂಡಿದೆ.
“ಪ್ರತಿ ಐದು ವರ್ಷಗಳಿಗೊಮ್ಮೆ ರಾಮಮಂದಿರ ಕುರಿತ ಪ್ರತಿಕ್ರಿಯೆ ಸಾಮಾನ್ಯವಾಗಿದ್ದು ಬಿಜೆಪಿ ರಾಮಮಂದಿರ ಕುರಿತಂತೆ ಜನರ ಭಾವನೆ ಕೇಂದ್ರೀಕರಿಸಿಕೊಳ್ಳುತ್ತದೆ. ಕಾಂಗ್ರೆಸ್ ತಾನು ವಿವಾದವು ಸುಪ್ರೀಂ ಗೆ ಹೋಗುವ ಮುನ್ನವೇ ತನ್ನ ನಿರ್ಣಯವನ್ನು ಕೈಗೊಂಡಿತ್ತು. ಆದರೆ ಇದೀಗ ಎಲ್ಲರೂ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಲೇ ಬೇಕಿದೆ” ಕಾಂಗ್ರೆಸ್ ನಾಯಕ , ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಂ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment