ರಾಜಕೀಯ ರಾಜ್ಯ

ಬಿಜೆಪಿ ವಿರುದ್ಧ ವಾಗ್ದಾಳಿ ಕೋಮುವಾದಿ ಶಕ್ತಿಗಳಿಗೆ ರಾಜ್ಯ ಮಾರಬೇಡಿ: ನಟ ಪ್ರಕಾಶ್‌ ರೈ

ಬೆಂಗಳೂರು: ‘ಕೋಮುವಾದಿ ಸಿದ್ಧಾಂತ ಅನುಸರಿಸುವ ಬಿಜೆಪಿ ಈ ದೇಶಕ್ಕೆ ಅಪಾಯಕಾರಿ. ರಾಜ್ಯವನ್ನು ಕೋಮುವಾದಿ ಶಕ್ತಿಗಳಿಗೆ ಮಾರಬೇಡಿ’ ಎಂದು ಚಿತ್ರನಟ ಪ್ರಕಾಶ್ ರೈ ಮನವಿ ಮಾಡಿದರು.

ಪ್ರೆಸ್‌ಕ್ಲಬ್‌ ವತಿಯಿಂದ ಇಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ವಾಜಪೇಯಿ ಅವರಂತಹ ನೇತಾರರ ಬಗ್ಗೆ ನಾನು ಮಾತನಾಡುವುದಿಲ್ಲ. ಬೆಳಗಾವಿ ಶಾಸಕ ಸಂಜಯ ಪಾಟೀಲ ಮುಸ್ಲಿಂ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವಂತಹ ಹೇಳಿಕೆ ನೀಡುತ್ತಾರೆ. ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಪ್ರತಿಪಾದಿಸುವ ವಿಚಾರ ಪ್ರಜಾಸತ್ತಾತ್ಮಕವಾಗಿ ತಪ್ಪು. ನನ್ನ ರಾಜ್ಯವನ್ನು, ನನ್ನ ದೇಶವನ್ನು ಇಂತಹವರ ಕೈಯಲ್ಲಿ ಕೊಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಬೆಳಗಾವಿ ಶಾಸಕ ಸಂಜಯ ಪಾಟೀಲ:

ನಿರ್ದಿಷ್ಟ ಪಕ್ಷಕ್ಕೆ ಮತ ನೀಡಿ ಎಂದು ನಾನು ಹೇಳುವುದಿಲ್ಲ. ಪ್ರತಿ ಪ್ರಜೆಯೂ ಸ್ವಂತ ನಿರ್ಧಾರ ತಳೆಯಬೇಕು. ಯಾವ ಪಕ್ಷದವರು ಯಾವ ತರಹ ಜಾತ್ಯತೀತ ತತ್ವ ಅನುಸರಿಸುತ್ತಿದ್ದಾರೆ ಎಂಬುದನ್ನು ಜನ ನೋಡಿದ್ದಾರೆ. ಯಾರಿಗೆ ಮತ ನೀಡಬೇಕು ಎಂಬುದನ್ನು ಅವರೇ ನಿರ್ಧರಿಸಬೇಕು’ ಎಂದರು. ಚುನಾವಣೆ ಸಂದರ್ಭದಲ್ಲಿ ನಾಯಕರು ಮಠ ಮಂದಿರಗಳಿಗೆ ಭೇಟಿ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ‘ರಾಹುಲ್ ಗಾಂಧಿ ಮಾತ್ರವಲ್ಲ ನರೇಂದ್ರ ಮೋದಿ, ಅಮಿತ್‌ ಶಾ ಮಠ ಮಂದಿರಗಳಿಗೆ ಭೇಟಿ ನೀಡಿದರೂ ನಾನು ಆ ಬಗ್ಗೆ ಮೌನ ವಹಿಸುತ್ತೇನೆ. ಕೆಲವರು ತಮ್ಮ ಧಾರ್ಮಿಕ ಸಿದ್ಧಾಂತವನ್ನು ಇನ್ನೊಬ್ಬರ ಮೇಲೆ ಹೇರುವುದಕ್ಕೆ ನನ್ನ ವಿರೋಧವಿದೆ’ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment