ರಾಜಕೀಯ

ಬಿಜೆಪಿ ಸಂಪರ್ಕದಲ್ಲಿ 15 ಜನ ಕೈ ಶಾಸಕರು, 24ಗಂಟೇಲಿ ಸರ್ಕಾರ ಪತನ: ಉಮೇಶ್ ಕತ್ತಿ

ಬೆಳಗಾವಿ: ಸಂಪುಟ ಪುನಾರಚನೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಮತ್ತೊಂದೆಡೆ 15 ಜನ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, 24ಗಂಟೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ, ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

ಬುಧವಾರ ಬಿಜೆಪಿ ಮುಖಂಡರ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, 15 ಜನ ನಮ್ಮ ಸಂರ್ಪಕದಲ್ಲಿ ಇದ್ದು, ಆದರೆ ಈಗ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. 24ಗಂಟೆಯಲ್ಲಿ ಸರ್ಕಾರ ಪತನಗೊಳ್ಳಲಿದೆ. ಬಳಿಕ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಮಾತು ಉಳಿಸಿಕೊಳ್ಳದಿದ್ದರೆ ರಾಜೀನಾಮೆ ಕೊಡ್ತಾರಾ?: 24ಗಂಟೆಯಲ್ಲಿ ಸರ್ಕಾರ ಬೀಳುತ್ತೆ, ಹಾಗಾಗುತ್ತೆ ಹೀಗಾಗುತ್ತೆ ಅಂತ ಉಮೇಶ್ ಕತ್ತಿಯವರು ಬಾಯಿಗೆ ಬಂದಂತೆ ಮಾತನಾಡಬಾರದು. ಒಂದು ವೇಳೆ 24ಗಂಟೆಯಲ್ಲಿ ಸರ್ಕಾರ ಬಿದ್ದು ಹೋಗದಿದ್ದರೆ ಉಮೇಶ್ ಕತ್ತಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನಿಡಿದ್ದಾರೆ. ಸೀನಿಯರ್ ಶಾಸಕರು ಹೀಗೆ ಹುಚ್ಚು, ಹುಚ್ಚಾಗಿ ಮಾತನಾಡಬಾರದು. ತಮ್ಮ ಮಾತು ಉಳಿಸಿಕೊಳ್ಳದಿದ್ದರೆ ಮೊದಲು ಉಮೇಶ್ ಕತ್ತಿ ರಾಜೀನಾಮೆ ಕೊಡಲಿ ಎಂದು ವಾಗ್ದಾಳಿ ನಡೆಸಿದರು.

 

About the author

ಕನ್ನಡ ಟುಡೆ

Leave a Comment