ರಾಷ್ಟ್ರ

ಬಿಜೆಪಿ ಸದಸ್ಯರನ್ನು  ಮಹಾಭಾರತದ ಕೌರವರಿಗೆ ಹೋಲಿಸಿದ ರಾಹುಲ್ ಗಾಂಧಿ

ನವದೆಹಲಿ: ಬಿಜೆಪಿ ಹಾಗೂ ಆರ್.ಎಸ್.ಎಸ್.ನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಹಾಭಾರತದಲ್ಲಿನ ಕೌರವರಿಗೆ ಹೋಲಿಸಿದ್ದಾರೆ.ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ಹಾಗೂ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಬಳಿಕ  84 ನೇ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು   ಬಿಜೆಪಿ ವಿರುದ್ಧ  ಆಡಳಿತಾರೂಢವಾಗಿ ಗೂಡುಗಿದ್ದಾರೆ. ಜಿಜೆಪಿ ಸರ್ಕಾರಕ್ಕೆ  ಅಧಿಕಾರದ ಮದವೇರಿದೆ ಎಂದು ಆರೋಪಿಸಿದರು.

ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ನಡೆದ ಯುದ್ದದಲ್ಲಿ ಕೌರವರು ಸೊಕ್ಕಿನಿಂದ ಹೋರಾಟ ನಡೆಸಿದರೆ ಪಾಂಡವರು ನ್ಯಾಯಯುತವಾಗಿ ಹೋರಾಟ ನಡೆಸಿದರು. ಆದೇ ರೀತಿಯಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿದ್ದು ಕಾಂಗ್ರೆಸ್ ನ್ಯಾಯಯುತವಾಗಿ ಹೋರಾಟ ನಡೆಸಲಿದೆ ಎಂದರು.

ಪ್ರಸ್ತುತ ದೇಶವನ್ನು ಭ್ರಷ್ಟಾಚಾರ ಹಾಗೂ ಅಧಿಕಾರ ನಿಯಂತ್ರಣ ಮಾಡುತ್ತಿದೆ ಎಂದು ಆರೋಪಿಸಿದರು.ಜನರಿಗೆ ಉದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಬಿಜೆಪಿ ಗಮನ ಕೇಂದ್ರೀಕರಿಸಿಲ್ಲ . ಇದರ ಬಗ್ಗೆ ಮಾತನಾಡದ ಪ್ರಧಾನಿ ನರೇಂದ್ರಮೋದಿ   ಸಂಸತ್ತಿನಲ್ಲಿ ಗಬ್ಬರ್ ಸಿಂಗ್ ತೆರಿಗೆ ಹಾಗೂ ಯೋಗದ ಬಗ್ಗೆ ಮಾತನಾಡುತ್ತಾರೆ ಇದು ನಮಗೆ ಬೇಕಿಲ್ಲ ಎಂದು ಹೇಳುತ್ತಾ ಕಾಂಗ್ರೆಸ್  ಸತ್ಯ ಹಾಗೂ ನ್ಯಾಯಕ್ಕಾಗಿ ಹೋರಾಡುವುದನ್ನು ನಿಲ್ಲಿಸುವುದಿಲ್ಲ ಎಂದರು.

ಅಲ್ಪಸಂಖ್ಯಾತರ ಬಗೆಗಿನ ಬಿಜೆಪಿ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಸಹಸ್ರಾರು ಜನ ಮುಸ್ಲಿಂರು ದೇಶದಲ್ಲಿದ್ದಾರೆ.  ತಮಿಳು ಭಾಷಿಕರು ಮತ್ತು ಈಶಾನ್ಯ ಜನರ ಬಗ್ಗೆ ಮಾತನಾಡುವುದಿಲ್ಲ ಮೋದಿಯವರು. ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಕಲಬುರಗಿ ಹತ್ಯೆಯಲ್ಲಿ  ಯಾಕೆ ಮೌನ ವಹಿಸಿದ್ದೀರಾ ಬಿಜೆಪಿಯವರು ಇದರಲ್ಲಿ ನಿಮ್ಮ ಪಾತ್ರವಿದೆಯೇ  ಎಂದು ರಾಹುಲ್ ಗಾಂಧಿ ಪ್ರಶ್ನೆಗಳ ಸುರಿಮಳೆಗರೆದರು.

 

 

About the author

ಕನ್ನಡ ಟುಡೆ

Leave a Comment